ಪೊಂಗೊಳಲಾನು ಕರದಲ್ಲಿ ಪಿಡಿದು sripadarajaru



    Restart mobile & try if the above audio is not playing

ಶ್ರೀ ಶ್ರೀಪಾದರಾಜರ ಕಣ್ಣಲ್ಲಿ ಶ್ರೀ ಗೋಪಿನಾಥನ ಮಹಿಮಾ ವರ್ಣನ "

ರಾಗ : ಮಧ್ಯಮಾವತಿ  ಅದಿತಾಳ 


ಪೊಂಗೊಳಲಾನು ಕರದಲ್ಲಿ ಪಿಡಿದು ।

ಹ್ಯೆಂಗಳಾ ಮಧ್ಯದಲ್ಲಿ ನಿಂದಾನು ಕೃಷ್ಣ 

।।ಪಲ್ಲವಿ।। 


ನೀಲ ಮೇಘ ರತುನದ ಕಾಂತಿಯು ಹರಿಯು ।

ಬಾಲ ಸೂರ್ಯನಂದದಿ ವಸನವನುಟ್ಟು ।

ಲೋಲಚಾರುಮಣಿ ಮಕರಕುಂಡಲನಿಟ್ಟು ।

ಬಾಲ ಲೀಲೆಯಿಂದ ಬನದೊಳಗಾಡುವ ।।1।। 


ಮತ್ತಭೃಂಗ ಕೂಜಿತ ವನಮಾಲೆ 

ಭಾಸ್ತಿ ಶಂಖ ಚಕ್ರ ಗದೆ ಕೌಮೋದಕಿಯು ।

ಉತ್ತಮಾಂಗ ನಸಲೊಳು ತಿಲಕವಿಟ್ಟು ।

ಮತ್ತಾದ ವಜ್ರದ ಅಂಗಾನೆರೊಡನೆ ।।2।। 


ಮಂಗಳಮುನಿ ಹೃದಯ ಮಂದಿರ । ಮನ ।

ದಂಗಳದೊಳಗಾಡುವ ಹರಿ ನಮ್ಮಾ ।

ಕಂಗಳ ಪಥದಲ್ಲಿ ಸುಳಿದನುಭವ 

ಅನಂಗಳಾದಿ ವ್ರಜರಂಗನೆರೊಡನೆ ।।3।। 


ಅಂದು ಗೋವು ಗೋಪರು ಗೋಪಿಯರೊಡನೆ ।

ಬಂದು ನಿಂದು ವೃಂದಾವನದ್ಯಡೆಯಲ್ಲಿ ।

ನಂದಾನಂದನರೊಳಗಾಡಿದ ಪರಿ ।

ಯಿಂದ್ಯನ್ನ ಮನದಾಂಗಣದೊಳಗೆ 

।।4।। 


ಅಂಗ ರಂಗ ವಿಲಸಿತ । ಕರುಣಾಂಗಾ ।

ನಂಗಕೋಟಿ ಗಂಗಾ ಜನಕಾನು ಹರಿ ।

ಅಂಗನೆಯರ ಮನದಾಂಗಣದೊಳಗೆ 

ಹಿಂಗಾದೆ ನಿಂದಾನು ರಂಗವಿಠ್ಠಲನೂ ।।5।।

***



Comments