ಉಪಕಾರವ ನೋಡೋ ಮಾಡಿದ vidyaprasannat teertharu


 

Restart mobile & try if the above audio is not playing

ವಿದ್ಯಾಪ್ರಸನ್ನತೀರ್ಥರ ಕೃತಿ 


ರಾಗ : ಪೂರ್ವಿಕಲ್ಯಾಣಿ   AditalA


ಉಪಕಾರವ ನೋಡೋ ಮಾಡಿದ ಪ


ಕೃಪೆ ಬೇಡುವುದತಿಶಯವೇ ಪೇಳೊ ಅ.ಪ


ಪಾಲಕ ನೀ ಹದಿನಾಲ್ಕು ಜಗಗಳಿಗೆ

ಮೂಲೆಯ ಗ್ರಾಮದಲಡಗಿ ಬೇಸರದಿ

ಕಾಲಕಳೆಯುವುದ ನೋಡಿ ಮರುಕದಲಿ

ಬಾಲ ಮೂರುತಿಯ ಜಗಕೆ ತೋರಿಸಿದ 1


ಅಡಕು ಮಣೆಗಳಲಿ ಪೂಜೆಯಗೊಳ್ಳುತ

ಒಡಕು ತೊಗರಿ ಹುಳಿಯನ್ನವ ಮೆಲ್ಲುತ

ಬಡತನದಲಿ ಜೀವನ ಕಳೆಯುತಿರೆ

ಪೊಡವೀಶನ ಭೋಗಗಳನು ಉಣಿಸಿದ 2


ಸುಂದರ ನವ ಮಣಿ ಮಂದಿರ ವಿಧ ವಿಧ

ಅಂದದ ಮುತ್ತಿನ ಹಾರ ಪದಕಗಳು

ತಂದೆ ಪ್ರಸನ್ನನೇ ಸಾಸಿರ ಸಾಸಿರ

ಮಂದಿಗಳಿಗೆ ವೈಭವಗಳ ತೋರಿದ 3

***


Comments