ಮಧುರವು ಮಧುರನಾಥನ ನಾಮವು vidyaprasanna teertharu
Restart mobile & try if the above audio is not playing
Vidyaprasannateerthara kruti
Hindola raga Aditala
ಮಧುರವು ಮಧುರನಾಥನ ನಾಮವು ಪ
ದಧಿ ಮಧು ದ್ರಾಕ್ಷಾ ಸುಧೆರಸಗಳಿಗಿಂತ ಅ.ಪ
ಸುಂದರವದನನ ಅರವಿಂದ ನಯನನ
ನಂದಕುಮಾರನ ಚಂದದ ನಾಮವು 1
ಯದುಕುಲ ತಿಲಕನ ಸದÀಮಲ ಚರಿತನ
ಮದನ ಪಿತನ ನಾಮ ಮುದದಲಿ ಪಾಡಲು2
ಗಾನವಿಲೋಲನ ದಾನವ ಕಾಲನ
ಲೀಲೆಗಳನು ಸದಾ ಲಾಲಿಸಿ ಪೊಗಳಲು3
ಹೇಮವಸನನ ಕೋಮಲ ರೂಪನ
ಭಾಮಾಕಾಂತನ ಪ್ರೇಮದ ನಾಮವು 4
ಪನ್ನಗಶಯನನ ಚಿನ್ಮಯ ರೂಪನ
ಸನ್ನುತಿಸಲಿಕೆ ಪ್ರಸನ್ನನ ನಾಮವು 5
***
Comments
Post a Comment