ನಡಿರೆ ನಡಿರೆ ನೋಡುವ ಶ್ರೀಕೃಷ್ಣನ mahipati dasaru

 


Restart mobile & try if the above audio is not playing

Sri mahipatidasara kruti

Aberi raga


ನಡಿರೆ ನಡಿರೆ ನೋಡುವ ಶ್ರೀಕೃಷ್ಣನ

ನಡಿರೆ ನಡಿರೆ ನೋಡುವ ||ಧ್ರುವ||


ನಡಿರೆ ನೋಡುವ ಬನ್ನಿ ತುಡುಗ ಶ್ರೀಕೃಷ್ಣನ

ಅಡಿಗಳಾಶ್ರಯ ಹಿಡುವ ಮಂಡಲದೊಳು ||೧||


ತುಡುಗತನದಿ ಬಂದು ಕದಿದ ಬೆಣ್ಣೆಯ ಮೆದ್ದು

ಒಡನೆ ಗೋಪೇರ ಕಾಡಿದ ನೋಡಮ್ಮ ||೨||


ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ

ತಡೆಯದೆ ಧುಮುಕಿದ ಮಡುವಿನೊಳು ||೩||


ಕ್ರೀಡಿಸಿ ಗೋಪೇರ ಉಡುಗೆ ಸೆಳೆದುಕೊಂಡು

ಒಡನೆ ಗಿಡವನೇರಿದ ನೋಡಮ್ಮ ||೪||


ಮಾಡದ ಮಾಡಿ ತಾ ಬಿಡದೆ ಬೇಡಿಸಿಕೊಂಡು

ಒಡನೆ ಉಡುಗೆ ನೀಡಿದ ನೋಡಮ್ಮ ||೫||


ಬಡವರಿಗಳವಲ್ಲ ಪೊಡವಿಯೊಳಗಿದು

ಆಡಿದಾನಂದದಾಟ ನೋಡಮ್ಮ ||೬||


ಹಿಡಿಯಹೋಗಲು ಮೂಢ ಮಹಿಪತಿಯ ನೋಡಿ

ಒಡಲ ಹೊಕ್ಕು ಕೂಡಿದ ಒಡೆಯನಮ್ಮ ||೭||

***


Comments