ಇಂದು ನೀ ಕರೆದು ತಾರೆ ಬೇಗನೆ helavanakatte giriyamma

 


    Restart mobile & try if the above audio is not playing

ಶ್ರೀ ಹೆಳವನಕಟ್ಟೆ ಗಿರಿಯಮ್ಮನವರ ಕೃತಿ 


ರಾಗ : ಬೆಹಾಗ್   ಅದಿತಾಳ 


ಇಂದು ನೀ ಕರೆದು ತಾರೆ ಬೇಗನೆ ಪೋಗಿ

ಚನ್ನವೆಂಕಟರಾಯನ

ಮೊನ್ನೆ ಆಡಿದ ಮಾತು ಒಂದೂ ನಿಜವಲ್ಲಾ

ರನ್ನೆ ಈಗಲೆಪೋಗಿ ಸನ್ನೆ ಮಾಡಿಬಾರೆ IIಪII


ಅಂಗಜನಯ್ಯನ ಕಾಣದೆ ನಾನು ಹಿಂಗಿರಲಾರೆ ನಮ್ಮಾ

ಕಂಬುಕುಚದ ಬಾಲೆ

ರಂಗನಾ ಕರತಾರೆ

ರಂಗು ಮಾಣಿಕದಹರಳುಂಗುರ ಕೊಡುವೆನು   II1II


ಕಾಲಿಗೆ ಎರಗುವೆನೆ

ಕೋಮಲಮುಖಿ ಆಲಸ್ಯ ಮಾಡದೆಲೆ

ನೀಲಕುಂತಳನೀರೆ | ಲೋಲನ ಕರತಾರೆ

ವಾಲೆಮೂಗುತಿ ಕಂಠಮಾಲೆಯ ಕೊಡುವೆನು   II2II


ಮರದಿರಲಾರೆನಮ್ಮಾ

ಬೇಗನೆಪೋಗಿ ನೆರವಂತೆ ಮಾಡು ನೀನು

ಯರವುತನವುಬ್ಯಾಡಾಮರೆಯಲಾರೆನೆ ನಿಮ್ಮಕರವಪಿಡಿವೆ ಹೆಳವನ ಕಟ್ಟೆರಂಗೈಯ್ಯನ  II3II

***



Comments