ತಾರಮ್ಮ ಶ್ರೀ ರಂಗಧಾಮನ ತಂದು helavanakatte giriyamma

 


Restart mobile & try if the above audio is not playing

by ಹೆಳವನಕಟ್ಟೆ ಗಿರಿಯಮ್ಮ


ರಾಗ : ಕಾಫಿ   THISHRANADE


ತಾರಮ್ಮ ಶ್ರೀ ರಂಗಧಾಮನ ತಂದು

ತೋರಮ್ಮ ಎನ್ನಯ ಪ್ರೇಮನ

ವಾರಿಜಸಖಶತಕೋಟಿತೇಜನ ಹೊಂತ-

ಕಾರಿಯ ನೀ ಕರತಾರೆ ಸೈರಿಸಲಾರೆ IIಪII


ವೃಂದಾವನದೊಳಗಾಡುವ ಶ್ರೀ-

ಗಂಧವ ಮೈಯೊಳು ತೀಡುವ

ಚಂದದಿ ಕೊಳಲೂದಿ ಪಾಡುವ ನಮ್ಮ

ಕಂದರ್ಪ ಜಲಕ್ರೀಡೆಯಾಡುವ

ನಂದ ನಂದನ ಗೋವಿಂದನ ಕಾಣದೆ

ಒಂದು ನಿಮಿಷ ಯುಗವಾಗಿ ತೋರುತಲಿದೆ II1II


ಉಡುವ ಸೀರೆಯ ಸೆಳೆದೋಡುವ ದೊಡ್ಡ

ಕಡಹದ ಮರವೇರಿ ನೋಡುವ

ಕೊಡಲೊಲ್ಲದೆ ಬಹುಕಾಡುವ ಲಜ್ಜೆ-

ಗೆಡಿಸಿ ಮಾನಿನಿಯರ ಕೂಡುವ

ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿ ಎ-

ನ್ನೊಡೆಯನ ಕರತಾರೆ ಅಡಿಗೆರಗುವೆ ನಾ II2II


ನೀಲವರ್ಣನ ನಿಜರೂಪನ ಶ್ರೀ-

ಲೋಲ ಹೆಳವನಕಟ್ಟೆವಾಸನ

ಜಾಲಿ ಹಾಳ ವೆಂಕಟೇಶನ ಭಕ್ತ-

ಪಾಲಕ ಪರಮವಿಪೋಷನ

ಆಲಸ್ಯವ್ಯಾಕೆನ್ನ ಇನಿಯನ ಕರೆತಾರೆ

ಬಾಲೆ ನಿನಗೆ ಕಂಠಮಾಲೆಯ ಕೊಡುವೆ II3II

***



Comments