ಮರುಕವಾಗದೆ ನಿನಗೇ ರಘುರಾಮಚಂದ್ರ raghurama vittalaru
Restart mobile & try if the above audio is not playing
raga darbari kanada aadi tala
ಶ್ರೀ ಕೂಡ್ಲಿ ಮಠದ ಪೀಠಾಧಿಪತಿ ಆಗಿದ್ದ ಶ್ರೀ ರಘುಪ್ರೇಮತೀರ್ಥರ ಪೂರ್ವಾಶ್ರಮದ ಪುತ್ರರು
ಮುತ್ತಗಿ ಸ್ವಾಮಿರಾಜಾಚಾರ್ಯ (ರಘುರಾಮ ವಿಠಲ ದಾಸರು)
Total Krutis - 15 Vrundavana- Adoni
1972 vaishakha bahula panchame
**
ಮರುಕವಾಗದೆ ನಿನಗೇ ರಘುರಾಮಚಂದ್ರ
ಕರೆದರೆ ಧ್ವನಿ ಕೇಳದೆ |
ರಘುರಾಮಚಂದ್ರ
ಮಾರುತನಂತೆ ನಿನ್ನ ಸೇವಿಸಲರಿಯೆನು
ಭರತನಂತೆ ನಿನ್ನ ಪೂಜಿಸಲರಿಯೆನು ||ಪ ||
ಮಖರಿ ಬಾಧೆಗೆ ಸಿಲುಕಿದ ಕರೀರಾಜ ತನ್ನ
ಪೊರೆಯೇ ಶ್ರೀ ಹರಿಯೆನಲು
ಕರಿಯ ಮೊರೆಯ ಕೇಳಿ ತ್ವರಿತದಿಂದ ಬಂದು |
ಕರೀರಾಜನನ್ನೇ ಉದ್ದರಿಸಲಿಲ್ಲವೋ ರಂಗ||
ದುರುಳ ರಕ್ಕಸನು ತನ್ನ ಶಿಶುವನ್ನೇ ಪಿಡಿದು
ತೋರೋ ಶ್ರೀ ಹರಿ ಎನಲು
ತರಳ ಪ್ರಹ್ಲಾದ ನ ಕರುಳ ವಚನ ಕೇಳಿ
ತ್ವರಿತದಿಂದಲಿ ಸ್ಥಭ ಒಡೆಯಲಿಲ್ಲವೋ ದೇವಾ ||
ವಾಮನ ಮೂರುತೀಯು ಬಲಿರಾಜನ ಯಾಗ ಮಂಟಪಕೆ ಪೋಗಿ
ಮೂರು ಪಾದದಷ್ಟು ಭೂಮಿ ದನವ ಕೇಳಿ
ಬಲಿಯ ಮೆಟ್ಟಿದ ಶ್ರೀ ರಘುರಾಮ ವಿಠಲ ನಂತೇ ||
***
Comments
Post a Comment