ಮುದ್ದು ಸುರಿಯುತಾನೆ ನೋಡಿ ಶ್ರೀ ಕೃಷ್ಣ pradyumna teertharu

 


  Restart mobile & try if the above audio is not playing

ಶ್ರೀ ಶ್ರೀ ಪ್ರದ್ಯುಮ್ನತೀರ್ಥರ ಕೃತಿ 

ರಾಗ : ಸಾವೇರಿ ಅದಿತಾಳ 


ಮುದ್ದು ಸುರಿಯುತಾನೆ ನೋಡಿ ಶ್ರೀ ಕೃಷ್ಣ llpall


ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ

ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲು

 llಅ.ಪll


ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ

ಸಾವೇರಿ ಮೊದಲಾದ ರಾಗವ ಪಾಡುತ ll1ll


ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು

ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ ll2ll


ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ

ಮುಕುಟ ಶಿರಶ್ಚಕ್ರ ಶೋಭಿತಮುಖ ll3ll


ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ

ಶ್ರೀ ಪದ್ಮಭವವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ ll4ll


ಶ್ರೀ ನರಹರಿಯು ತಾ ನೆನೆಯುವರಿಗೆ

ಭವ ಕಾನನದ ಭಯದ ಮನ ಶಂಕಿಸದಿರೆಂದು ll5ll

***


Comments