ಪ್ರೇಮದಿಂದೊಂದಿಸುವೆ ಗುರುವೃಂದಕೇ pradyumna teertharu
Restart mobile & try if the above audio is not playing
ಪ್ರದ್ಯುಮ್ನತೀರ್ಥರ ಕೃತಿ "ಗುರು ಸ್ತುತಿ "
ರಾಗ : ಅಭೋಗಿ ಅದಿತಾಳ
ಪ್ರೇಮದಿಂದೊಂದಿಸುವೆ ಗುರುವೃಂದಕೇ
ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು
llಪll
ಸತಿಯ ಬೇಡುವನಲ್ಲ ಸುತರ ಬೇಡುವನಲ್ಲ
ಅತಿಶಯದ ಭಾಗ್ಯವನು ಕೇಳ್ವನಲ್ಲ
ರತಿಪತಿ ಆಟವನು ಖಂಡಿಸಿ ಬೇಗದಲಿ
ಮತಿ ತಪ್ಪಲೆನಗೆ ದುರ್ವಿಷಯದೊಳಗೆಂದು
ll1ll
ಶಕ್ತಿ ಬೇಡುವನಲ್ಲ ಯುಕ್ತಿ ಬೇಡುವನಲ್ಲ
ಭುಕ್ತಿ ಎನಗಿಲ್ಲೆಂದು ಕೇಳ್ವನಲ್ಲ
ಮುಕ್ತಿದಾಯಕ ನಮ್ಮ ವಿಟ್ಠಲನ ಚರಣದಲಿ
ಭಕ್ತಿ ದೃಢವಾಗೆನಗಿತ್ತು ರಕ್ಷಿಸಲೆಂದು ll2ll
ಮಾನ ಬೇಡುವನಲ್ಲ ದಾನ ಬೇಡುವನಲ್ಲ
ಹೀನತನ ಬ್ಯಾಡೆಂದು ಕೇಳ್ವನಲ್ಲ
ಮಾನನಿಧೀಶ ನಮ್ಮ ಶ್ರೀ ನರಹರಿಯ ಚರಣವನು
ಕಾಣಿಸುವ ಜ್ಞಾನವನು ದಾನಮಾಡಲಿ ಎಂದು ll3ll
***
Comments
Post a Comment