ಮುರಳಿ ಧ್ವನಿಯ ಮಾಡೋ ಮುರಾರೇ pradyumna teertharu
Restart mobile & try if the above audio is not playing
ಪ್ರದ್ಯುಮ್ನತೀರ್ಥರ ಕೃತಿ
ರಾಗ : ಕಲ್ಯಾಣಿ ಅದಿತಾಳ
ಮುರಳಿ ಧ್ವನಿಯ ಮಾಡೋ ಮುರಾರೇ llಪll
ಮುರಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲ
ಹರುಷದಿಂದಲಿ ಭವ ಶರಧಿ ದಾಟುವರೈ llಅ.ಪll
ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟು
ಕಾಮಜನಕ ಗುಣಧಾಮ ಶ್ರೀ ಕೃಷ್ಣಾ ll1ll
ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದ
ಆವು ಮೆಚ್ಚುವಂತೆ ಸಾವಧಾನದಿಂದ ll2ll
ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿ
ಪ್ರೇಮದಿಂದೊಪ್ಪುತ ಶ್ರೀ ಮನೋರಮನೆ ll3ll
ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗ
ನಳಿನಮುಖಿಯರನ್ನು ಒಲಿಸುತಲೊಮ್ಮೆ ll4ll
ವನಜಸಂಭವಪಿತ ಶೀ ನರಹರಿಯೆ
ಕನಸಿನಂದದಿ ಜಗವರಿತು ನೆನೆಯುವಂತೆ ll5ll
***
Comments
Post a Comment