ಭ್ರಷ್ಟನೆಂದಿಸಿದೆಯಾ ಕೃಷ್ಣ ಎನ್ನ pradyumna teertharu
Restart mobile & try if the above audio is not playing
ಶ್ರೀ ಶ್ರೀ ಪ್ರದ್ಯುಮ್ನತೀರ್ಥರ ಕೃತಿ
ರಾಗ : ಶುಭಪಂತುವರಾಳಿ ಆದಿತಾಳ
ಭ್ರಷ್ಟನೆಂದಿಸಿದೆಯಾ ಕೃಷ್ಣ ಎನ್ನ IIpaII
ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ
ಪರಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ IIa. PII
ನರರ ಸಂದಣಿಯಲಿ ವಿರತಿ ಮಾತಾಡಿಸಿ
ಮಾರನಾಟದಿ ಮನವೆರಗುವಂದದಿ ಮಾಡಿ
ಕಾಷಾಯ ದಂಡಿ ವೇಷವ ಧರಿಸಿ ಮುನ್ನ
ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸಿದೆನ್ನ ll1ll
ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ
ಶರಪಂಜರದಿ ಬಿಗಿದು ಚರಣ ತೋರಿಸದೆಲೆ
ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ
ಒದಗಿಸೆನ್ನಲಿ ದೂರನಾದಿಯ ಹೇ ಮಾಧವ ll2ll
ದ್ವಿಜ ಅಜಮಿಳ ನಿಜನಾಮದಿಂದಲಿ
ಸುಜನನೆಂದೆನಿಸಿದ್ದು ನಿಜತೋರದಲೆನ್ನ
ಹೀನರೊಳೆನ್ನೆಂಥ ಹೀನ ಜನರ ಕಾಣೆ
ಸಾನುರಾಗದಿ ಕಾಯೊ ಶ್ರೀ ನರಹರಿಯೆ ll3ll
***
Comments
Post a Comment