ಕೊಟ್ಟ ಬಿಡಾರದಲಿ ಎಷ್ಟು ದಿನ ಜೀವಿಸಲೊ gurugopala dasaru


  Restart mobile & try if the above audio is not playing

ಶ್ರೀ ಶ್ರೀಗುರುಗೋಪಾಲದಾಸರ ಕೃತಿಆದಿತಾಳ: ಮುಖಾರಿ    ಆದಿತಾಳ


ಕೊಟ್ಟ ಬಿಡಾರದಲಿ ಎಷ್ಟು ದಿನ ಜೀವಿಸಲೊ | 

ಕಷ್ಟ ಪಡಲಾರೆ ಹರಿಯೆ || ಪ | 


ಕೋಟಲೆಯ ಸಂಸಾರ ಸಾಗರದಿ ಸಿಲುಕಿ ನಾ | 

ಪಾಟು ಬಡಲಾರೆ ಹರಿಯೆ   ಆದಿತಾಳ


ಕಟ್ಟುಗಳು ಸಡಲಿದವು ಬಳೆಮೊಳೆ ಕದಲಿದವು | 

ದಟ್ಟ ಕಂಭಗಳು ಕುಸಿದವು ।

ಕಟ್ಟು ಪಡಸಾಲೆಗಳು ಬಟ್ಟ ಬಯಲಾದವು | 

ಕಟ್ಟಿ ಹೊದ್ದಿಸಲಾರೆನೊ ಸ್ವಾಮಿ 

॥ ೧ ॥


ಆರೆರಡು ಹಾರಿದವು ಹಾರಿ ಹೋಯಿತು ಹೊದಿಕೆ | 

ಜಾರಿ ಬಿದ್ದವು ಗಳುಗಳು |

ಆರು ಮೂರೆಂಬ ತಲೆಬಾಗಿಲೆಲ್ಲವು ಕುಸಿದು । 

ಸೋರುತಿದೆ ನಾಲ್ಕು ಕಡಿಗೆ ಸ್ವಾಮಿ || ೨ ||


ಗೇಣೇಳು ನಿಚ್ಚಣಿಕೆ ಬಾಣದ ನೆಲೆ ಸೂತ್ರ |

ಕ್ಷೋಣಿಯಲಿ ಓಡ್ಯಾಡುತ

ಪ್ರಾಣ ನಾಯಕ ಗುರುಗೋಪಾಲ ವಿಠಲ ।

ಆನಂದನಿಲಯವಾಸಾ ಶ್ರೀಶಾ ॥ ೩ ॥

***


Comments