ಭಜರೇ ರಾಮಂ ಹೃದಯಸರಾಮಂ vidyaratnakara teertharu

 


 Restart mobile & try if the above audio is not playing


ಶ್ರೀ ಶ್ರೀ ವಿದ್ಯಾರತ್ನಾಕರ ತೀರ್ಥರ ಕೃತಿ 

ಅಂಕಿತ : ನಾಮಗಿರಿ

ರಾಗ : ತೋಡಿ   ಅದಿತಾಳ 


ಭಜರೇ ರಾಮಂ ಹೃದಯಸರಾಮಂ 

ರಾಘವ ವಂಶ ಪಯೋನಿಧಿ ಸೋಮಂ [ಅ.ಪ]


ನೀರದನೀಲ ಸಚ್ಚಿತ್ಸುಖಕಾಯಂ 

ಗಾಧಿತನೂಜ ಮುನೀಂದ್ರವಿಧೇಯಂ II1II  


ಧೂರ್ಜಟಿಚಾಪವಿಭೇದನಂ ಅಭಯಂ 

ಸಾದರಂ ಅಗಮಸಂತತಿಗೇಯಂ  II೨II


ಪಾತಕದಾವದವಾನಲಲೀಲಂ 

ಕೇಸರಿನಂದನದಾಪಿತಮಾಲಂ  II೩II


ಜಾನಕೀ ಮುಖ ಸರಸೀರುಹಮಧುಪಂ 

ಭೂತಲ ಭರಹರಣೋಧೃತ ಚಾಪಂ  II೪II


ಪಾದರಜೋಹತ ತಾಪಸಿ ಪಾಪಂ 

ನಾಮಗಿರೀಶ್ವರನರಹರಿರೂಪಂ II5II

***

Comments