ಮಲಗು ಮಲಗೆಲೊ ಸುಮ್ಮನೆ ಸುಕುಮಾರ vidyaprasanna teertharu


 Restart mobile & try if the above audio is not playing

ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥರ ಕೃತಿ 


ರಾಗ : ಚಕ್ರವಾಕ   ಅದಿತಾಳ 


ಮಲಗು ಮಲಗೆಲೊ ಸುಮ್ಮನೆ ಸುಕುಮಾರ

ಚೆಲುವ ಜೋಗುಳವ ಪಾಡುವೆ ಗೋಪಾಲ llಪll


ಲಲನಾಮಣಿಯರು ಸುಲಭದಿ ನಿನ್ನನು

ಕಲಭಾಷಣದಿಂದ ಸೆಳೆಯ ಬಯಸುತಿಹರೋ  llಅ.ಪll


ಭೋಗಿಶಯನ ಹರಿ ಈ ಜಗದೊಳಗೆ

ಈಗ ಬಂದಿರುವ ಜಾಗವನರಿಯದೆ

ಯೋಗಿ ಜನರು ಅನುರಾಗದಿಂದ ನಿನ್ನ

ಸಾಗಿಸಲಿರುವರೊ ಕೂಗದೆ ಸುಖದಲಿ ll1ll


ದುರುಳ ಶಕಟನನು ಮುರಿದ ಕೋಮಲದ

ಚರಣ ಕಮಲಗಳು ಉರಿಯುತಲಿದ್ದರು

ಮರೆಯಲದನು ಸುವಿನೋದವೀಯುವ

ಸರಸಪದಗಳನು ಪರಿಪರಿಯರುಹುವೆನೊ   Il2ll


ಎನ್ನಯ ಕರಗಳು ನೋಯುತಲಿರುವುವು

ಚಿನ್ಮಯ ರೂಪನೆ ನಿದ್ರೆಯ ಮಾಡೊ

ಚಿಣ್ಣ ನಿನಗೆ ಸವಿಯಾದ ದಧಿ ಪಯ

ಬೆಣ್ಣೆಯ ಕೊಡುವೆ ಪ್ರಸನ್ನ ಸುಹೃದಯದಲಿ ll3ll

***

Comments