ದೇವ ಬೆಳಗಾಯಿತೋ ಎನ್ನಯ ಸೇವಾ vidyaprasanna teertharu



  Restart mobile & try if the above audio is not playing

ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ


ರಾಗ - ವಾಸಂತಿ  :  ತಾಳ - ಆದಿತಾಳ


ದೇವ ಬೆಳಗಾಯಿತೋ ಎನ್ನಯ ಸೇವಾ ll ಪ ll


ಸ್ವೀಕರಿಸೋ ಮಹಾನುಭಾವ ll ಅ ಪ ll 


ಮಧುರಗಾನವೇ ಗಂಗಾಸ್ನಾನ l

ಹೃದಯ ಶುದ್ಧಿಯೇ ಬದರೀಸ್ನಾನ l

ಬದಿಯಲಿರುವ ಭಕುತರ ಸಹವಾಸವೇ l

ನದಿನದಗಳವಗಾಹನ ಸ್ನಾನವೋ ll ೧ ll


ಹಾಲಿಗೆ ಕರದಲಿ ಥಾಲಿಯ ಪಿಡಿದು l

ಕೋಲಾಹಲ ಕಲಭಾಷಣ ಮಾಡುವ l

ಬಾಲರ ನಗುಮೊಗ ನೋಡಲು ಕೃಷ್ಣನ l

ಲೀಲೆಯ ಸಂದರ್ಶನಾನಂದವೋ ll ೨ ll


ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ l

ಕಲ್ಹಾರದ ನವ ಕುಸುಮದ ರಾಶಿಯ l

ಚಿಲ್ಲೆ ಪಿಲ್ಲೆಗಳ ಬಹುರೂಪದಿ ಶ್ರೀ l

ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ ll ೩ ll


ತಾತನೆಂದು ಮೊರೆಯಿಡುವರು ನೀ ಅನ್ನ l

ದಾತನೆಂದು ಮೊರೆಯುತಿಹರೋ l

ತಾತನ ಕಿವಿಗೆ ಮಾತನು ತಿಳಿಸಲು l

ದೂತನು ನಾ ಕಾದಿಹೆನೊ ಪ್ರಸನ್ನನೇ

***


Comments