ಶಂಭೋಶಿವಹರ ತ್ರಿಯಂಬಕ ಶ್ರೀಜಗದಂಬಾರಮಣ varadesha dasaru
Restart mobile & try if the above audio is not playing
ಶ್ರೀ ಶ್ರೀ ವರದೇಶದಾಸರ ಕೃತಿ
ರಾಗ: ರೇವತಿ ಅದಿತಾಳ
ಶಂಭೋಶಿವಹರ ತ್ರಿಯಂಬಕ ಶ್ರೀಜಗ -
ದಂಬಾರಮಣ ಪರಿಪಾಲಯಾ llಪll
ಅಜಿನಾಂಬರಧರ ಭಜಿಪರಾರ್ತಿಹರ
ತ್ರಿಜಗಪಾವನ ಗಂಗಾಧರ
ನಂದಿವಾಹನ ಸುರವೃಂದ ಸುಪೂಜಿತ
ಇಂದ್ರ ವಂದಿತ ಗರಕಂಧರ II1II
ಗಿರಿಜಾರಮಣ ನಿನ್ನ ಗುರುವೆಂದು ಮೊರೆಹೊಕ್ಕೆ
ಹರಿಭಕ್ತಿಯಲ್ಲಿ ಮನನಿಲ್ಲಿಸೋ
ನಂಬಿದೆ ನಿನ್ನ ಪಾದಾಂಬುಜ ಯುಗಳ ಹೇ
ರಂಭಜನಕ ಪೊರಿಯನ್ನನು II2II
ರಜತಾಚಲನಿವಾಸ ರಜನಿಚರ ವಿನಾಶ
ಅಜನಸುತನೆ ದಿಗಂಬರ
ಸರ್ವಶ್ರೀ ವರದೇಶವಿಠಲನ ಸಖ ಮು -
ಪ್ಪುರಹರ ಶ್ರೀ ಮಹಾದೇವ Il3ll
***
Comments
Post a Comment