ಬಿಲ್ಲೆಗಾರನು ಆದನು ರಂಗಯ್ಯ ರಂಗ tandepurandara dasaru


  Restart mobile & try if the above audio is not playing

ಶ್ರೀ ಶ್ರೀ ತಂದೆ ಪುರಂದರದಾಸರ ಕೃತಿ 

ರಾಗ : ಮೋಹನ   ಆದಿತಾಳ 


ಬಿಲ್ಲೆಗಾರನು ಆದನು ರಂಗಯ್ಯ ರಂಗ [ಪ]

ಬಿಲ್ಲೆಗಾರನಾಗಿ ಎನ್ನ ಕಾವಲಾದ 

ಬಲ್ಲವರ ಭಾಗ್ಯವೋ ಎಲ್ಲವರಿತ ಸ್ವಾಮಿ [ಅ.ಪ]


ಸಾಟಿಯಿಲ್ಲದ ಪರಿ ತಲೆಯಲಿ ಕಟ್ಟಿಹ 

ನಿಟಾಗಿ ಧರಿಸಿಪ್ಪ ಅಂಗಿಗಳು

ನೋಟಕ್ಕೆ ಆಶ್ಚರ್ಯ ಕಾಲಲಿ ತೊಟ್ಟಿದ್ದು 

ಜಾಡೇ ಮಾಡುತ ಎನ್ನ ಬೆನ್ಹಿಂದೆ ನಿಂದನು [೧]


ನಡುವಿಲಿ ಸುತ್ತಿಹ ಬಣ್ಣದ ಪಟ್ಟೆಯ 

ಎಡದಲಿ ಪೊಳೆವುದು ಬಿಲ್ಲೆ ಒಂದು

ಒಡೆಯ ಎನ್ನಣ್ಣಯ್ಯ ಕರಗಳ ಕಟ್ಟಿಹ 

ಬೆಡಗು ಮಾಡುತಲಿ ಬೆನ್ನಟ್ಟಿ ಬಂದನು [೨]


ಒಂದೊಂದು ರೂಪದಿ ಒಂದೊಂದು ಭಕುತಗೆ 

ಒಂದೊಂದು ಕಾಲದಿ ತೋರುತಲಿ

ಕಂದ ಕೃಷ್ಣ ಏನ್ನ ತಂದೆ ಪುರಂದರ ವಿಠಲ 

ಇಂದಿಲ್ಲಿ ಬಂದನು ಬಿಲ್ಲೆಗಾರನಾಗಿ [೩]

***

Comments