ಇವಗೇಕೆ ಪರಿಮಳ ಇವಗೇಕೆ ಶೃಂಗಾರ purandara dasaru


   Restart mobile & try if the above audio is not playing

ಶ್ರೀಪುರಂದರದಾಸರ ಕೃತಿ

ರಾಗ : ಸಾರಂಗ   ತಾಳ : ಖಂಡಛಾಪು


ಇವಗೇಕೆ ಪರಿಮಳ ಇವಗೇಕೆ ಶೃಂಗಾರ |

ನವನೀತ ಚೋರ ನಾರುವ ಗೊಲ್ಲಗೆ ॥ಪ॥


ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ಲೇಪ |

ತಲೆದೋರದವಗೇಕೆ ದಟ್ಟ ಪುನುಗು |

ಬಲು ಕೇಶದವಗೇಕೆ ಬಾವನ್ನದ ಲೇಪ |

ಸಲೆಘೋರರೂಪಿಗೇಕೆ ನೊಸಲ ಸಾದು 1


ತುಲಸಿಮಾಲೆಯ ಧರಿಸಿದವಗೇಕೆ ಜವ್ವಾಜಿ |

ಕೊಲೆಗಡುಕಗೀಕೆ ಕುಂಕುಮತಿಲಕವು ||

ಅಲೆದಾಡುವವಗೇಕೆ ಅಂಗರಾಗದ ಸುಖ|

ಕಳವು ಮಾಡುವವಗೇಕನಂಗ ಸೊಬಗು 2


ಪರಸತಿಯ ಬಯಸುವಗೆ ಪನ್ನಗಶಯನವೇಕೆ

ಹರಿದಾಡುವನಿಗೇಕೆ ಅಡಪ - ಡವಿಕೆ ||

ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ |

ಧರೆಗಧಿಕನಾದನೀ ಪುರಂದರ ವಿಠಲ 3

***

Comments