ಅನುಗಾಲವು ಚಿಂತೆ ಮನುಜಗೆ purandara dasaru

   Restart mobile & try if the above audio is not playing

ಶ್ರೀಪುರಂದರದಾಸರ ಕೃತಿ

ರಾಗ : ಕೀರವಾಣಿ  ಖಂಡಛಾಪುತಾಳ


ಅನುಗಾಲವು ಚಿಂತೆ ಮನುಜಗೆ |

ಮನಹೋಗಿ ಮಾಧವನ ಒಡಗೂಡುವನಕ ॥ಪ.॥


ಹೆಂಡಿರಿದ್ದರು ಚಿಂತೆ ಹೆಂಡಿರಿಲ್ಲದ ಚಿಂತೆ |

ಕೊಂಡು ಕುರೂಪಿಯಾದರು ಚಿಂತೆಯು ||

ತೊಂಡನಾಗಿ ತಿರುಗಿ ತುತ್ತ ತರುವ ಚಿಂತೆ |

ಮಂಡೆ ಬೀಳುವ ತನಕ ಚಿಂತೆ ಕಾಣಣ್ಣಾ 1


ಬಡವನಾದರು ಚಿಂತೆ ಬಲ್ಲಿದನಾದರು ಚಿಂತೆ |

ಕೊಡಧನ ಕೈಯೊಳಿದ್ದರು ಚಿಂತೆಯು |

ಬಡವನಾಗಿ ತಿರುಗಿ ತುತ್ತ ತರುವ ಚಿಂತೆ |

ಪೊಡವಿಯೊಳಿಲ್ಲದ ಚಿಂತೆ ಕಾಣಣ್ಣಾ 2



ಮನೆಯಿದ್ದರೂ ಚಿಂತೆ ಮನೆಯಿಲ್ಲದ ಚಿಂತೆ |

ಮನೆ ಭಾರವತಿಯಾದರೂ ಚಿಂತೆಯು |

ಮನಸಿಜನಯ್ಯ ಶ್ರೀ ಪುರಂದರವಿಠಲನ |

ನೆನೆದರೆ ಚಿಂತೆಯೆ ಇಲ್ಲ ಕಾಣಣ್ಣಾ 3

***

Comments