ಮಂಗಳಂ ನರಸಿಂಹ ದೇವರಿಗೆ ಪನ್ನಂಗ ಶಯನಗೆ pandurangi huchchacharyaru
Restart mobile & try if the above audio is not playing
ಶ್ರೀತಿರುಪತಿ ಶ್ರೀಪಾಂಡುರಂಗಿ ಹುಚ್ಚಾಚಾರ್ಯ ವಿರಚಿತ (ಇಂದಿರೇಶಾಂಕಿತ)
ನರಸಿಂಹದೇವರ ಮಂಗಳ ಪದ
ರಾಗ : ಕೇದಾರ ಏಕತಾಳ
ಮಂಗಳಂ ನರಸಿಂಹ ದೇವರಿಗೆ ಪನ್ನಂಗ ಶಯನಗೆ ॥ಪ॥
ಭೂರಿ ಕಶ್ಯಪ ಘೋರ ನರಕದಿ ಕ್ರೂರ ಕೃತ್ಯ ನಡೆಸಿ
ಸಾರಿ ಕಂಬದಿ ಘೋರನ ಸಂಹಾರ ಮಾಡಿದ ಶ್ರೀರಮೇಶಗೆ॥೧॥
ಅಂಬುಜಾಕ್ಷಿಯ ನಂಬಿ ಶಂಖದಿ ಡಿಂಬಕನ ನೋಡಿ
ತುಂಬಿಣಿ ಶತಕೋಟಿ ಮಾನಸ ಡಿಂಬದೊಳು ನಿಜ ಬೊಂಬೆ ತೋರಿದೆ ॥೨॥
ಬಂದ ದಿವಿಜರಾನಂದ ಪಡಿಸಿದ ನಿಂದು ಭೂಮಿಯಲಿ
ಪೊಂದಿದಾತ್ಮಕ ನಂದ ಸುಖಿಸುವ ಇಂದಿರೇಶ ಸುರೇಂದ್ರ ವಂದ್ಯಗೆ॥೩॥
***
.jpeg)
Comments
Post a Comment