ನಿನಗೇನೊ ಭಕುತರ ಚಿಂತೀ gurujagannatha dasaru


Restart mobile & try if the above audio is not playing

ಶ್ರೀ ಶ್ರೀ ಗುರುಜಗನ್ನಾಥದಾಸರ ಕೃತಿ 

ರಾಗ : ರೀತಿಗೌಳ   ಆದಿತಾಳ


ನಿನಗೇನೊ ಭಕುತರ ಚಿಂತೀ|

ಘನಮಹಿಮ ಮಹದಾದಿಸುರವಂದ್ಯ ತಿಮ್ಮಾ ||ಪ||


ಶಿರಿದೇವಿ ನಿನರಾಣಿ ಪರಮೇಷ್ಠಿ ನಿನಪುತ್ರ

ಕಿರಿಯ ಮಗನು ಜಗತ್ಪ್ರಾಣದೇವ|

ಹಿರಿಯಸೊಸೆಯು ವಾಣಿ ಕಿರಿಯುಭಾರತಿದೇವಿ

ಪುರಹರನು ಮೊಮ್ಮಗನು ಸುರರು ಪರಿವಾರ || ೧ ||


ಸಕಲಲೋಕಕೆ ಅರಸು ಲಕುಮಿಕಾಂತನು ಎಂದು

ನಿಖಿಲವೇದಸ್ಮೃತಿಯು ಸಾರುತಿಹದೋ

ಅಖಿಳವ್ಯಾಪಕನಾಗಿ ಸಕಲಸುರನರರಿಂದ

ಭಕುತಿಪೂರ್ವಕ ಓಲಗವಕೈಕೊಂಬ ಸಮಯದಲಿ || ೨ ||


ಸುರನಾಥ ನೀನಲ್ಲದಿತರ ದೇವತೆಯುಂಟೆ

ಸರುವೋತ್ತಮಾನೆಂಬನಾವನವನೋ

ಸರಸಗುಣನಿಧಿಯೆ 

ಶ್ರೀಗುರುಜಗನ್ನಾಥವಿಠಲ

ವರಭಾಗ್ಯಮಬ್ಬಿನಲಿ ಇರುವೋ ಸಮಯದಲಿ ||  3 ||

***

Comments