ಗೋಪಾಲವಿಟ್ಠಲ ನೀ ಕಾಪಾಡೊ ಎನ್ನನು gopala dasaru

   Restart mobile & try if the above audio is not playing



ಶ್ರೀ ಶ್ರೀ ಗೋಪಾಲದಾಸರ ಕೃತಿ 

ರಾಗ : ಸಿಂಹೇಂದ್ರಮಧ್ಯಮ   ಆದಿತಾಳ 


ಗೋಪಾಲವಿಟ್ಠಲ ನೀ ಕಾಪಾಡೊ ಎನ್ನನು

ಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ ll ಪ ll


ಉದಿತ ತರಣಿನಿಭ ಪದ ಪದ್ಮ ನಿನ್ನಯ

ಹೃದಯದೊಳಗಿರಿಸಿ ಮುದದಿಂದ ಧ್ಯಾನಿಪ

ಸದಯರುಗಳ ಪಾದ ಪದುಮ ಸೇವೆಯನು

ಒದಗಿ ಪಾಲಿಸೊ ಶಶಿವದನ ಸುಸದನನೆ ll ೧ ll


ವಾಸುದೇವನೆ ಎನ್ನ ದೋಷಿಯೆಂತೆಂದರೆ

ಆಸರಿನ್ಯಾರು ನಿನ್ನ ದಾಸರದಾಸಗೆ

ದಾಸವಿನುತ ಹೀಗುದಾಸೀನ ಮಾಡಲು

ದಾಸಜನರು ನಿನ್ನ ಲೇಶವು ಮೆಚ್ಚರು ll ೨ ll


ಪಿರಿಯರೆಲ್ಲರು ನಿನ್ನ ಚರಣವ ಪೂಜಿಸಿ

ಪರಮಾನುಗ್ರಹ ಮಾಡಿ ಪರಿಪಾಲಿಸಿಪ್ಪರೆನ್ನ

ನಿರುತದಿಬೇಡುವೆ ಗೋಪಾಲವಿಟ್ಠಲ ಶ್ರೀಲೋಲನೆ

ದೊರೆಯೆ ನಿನ್ನ ಮೂರುತಿ ಬರಲೆನ್ನ ಮನಸಿಗೆ ll ೩ ll

**


Comments