ವೃಂದಾವನ ನೋಡಿರೋ ಗುರುಗಳ vyasavittalaru
Restart mobile & try if the above audio is not playing
ಶ್ರೀ ವ್ಯಾಸವಿಠ್ಠಲರ ರಚನೆ
ಶ್ರೀ ಸತ್ಯಬೋಧತೀರ್ಥರ ಸ್ತುತಿ ಪದ
ರಾಗ : ಮಧ್ಯಾಮಾವತಿ ಏಕತಾಳ
ವೃಂದಾವನ ನೋಡಿರೋ ಗುರುಗಳ
ವೃಂದಾವನ ನೋಡಿರೋ IIಪ ll
ಬೃಂದಾವನ ನೋಡಿ ಆನಂದ ಮದವೇರಿ
ಬಂದ ಅಘವೃಂದ ಕಳೆವ ಗುರು II ಅ. ಪ II
ಸತ್ಯಸಂಧರ ನೋಡಿರೋ ಅಲ್ಲೇ
ಶ್ರೀ ಸತ್ಯ ಧರ್ಮರ ನೋಡಿರೋ
ಸತ್ಯಸಂದರಿಗೆ ಸತ್ಯ ಧರ್ಮರಿಗೆ ನಿತ್ಯ
ಬೋಧಿಸುವ ಮುನಿ ಸತ್ಯ ಬೋಧರಾಯರ ದಿವ್ಯ ll1ll
ಶುದ್ಧ ಶಿಲೆಯ ಮಧ್ಯದಿ ಕುಳಿತು ಗುರು
ತಿದ್ದಿ ನಾಮವ ಧರಿಸಿ
ಮಧ್ವ ಮತ ಅಭಿವೃದ್ಧಿ ಗೊಳಿಸುವ
ಶುದ್ಧಮೂರುತಿ ರಾಮಭದ್ರನ್ನ ಸ್ಮರಿಸುವವರ ll2ll
ದಾಸ ಜನರ ಪೊರೆವ
ಮನದ ಅಭಿಲಾಷೆಯ ಪೂರೈಸುವ
ಸೋಸಿಲೆ ಸವಣೂರ ವಾಸವಾಗಿರುವ
ವ್ಯಾಸ ವಿಠಲದಾಸ ಶ್ರೀ ಸತ್ಯ ಬೋಧರ ll3ll
***

Comments
Post a Comment