ಶರಣು ಶರಣು ಶರಣುಮತ್ಸ್ಯನೆ ಕೂರ್ಮಕ್ರೋಡನೆ vyasarajaru
Restart mobile & try if the above audio is not playing
ಶ್ರೀ ಶ್ರೀವ್ಯಾಸರಾಜರ ಕೃತಿ
ರಾಗ : ಸಿಂಧುಭೈರವಿ
ಶರಣು ಶರಣು ॥ಪ॥
ಶರಣುಮತ್ಸ್ಯನೆ ಕೂರ್ಮಕ್ರೋಡನೆ
ನರಹರಿಯೆ ವಟುಭಾರ್ಗವ
ಶರಣುರಾಘವ ಕೃಷ್ಣ ಬುದ್ಧನೆ
ಶರಣು ಕಲ್ಕಿಯ ರೂಪನೆ ॥೧॥
ನಂಬಿದೆನು ನಾ ನಿನ್ನ ಕೇಶವ
ನಾರಾಯಣನೇ ಮಾಧವ
ಅಂಬುಜಾಕ್ಷ ಗೋವಿಂದ ವಿಷ್ಣುವೇ
ಸಂಭ್ರಮದಿ ಮಧುಸೂದನ ॥೨॥
ಕರುಣದಲಿ ರಕ್ಷಿಸು ತ್ರಿವಿಕ್ರಮ
ಕಿರಿಯ ವಾಮನ ಶ್ರೀಧರ
ಪರಮಪಾವನ ಹೃಷೀಕೇಶನೆ
ಪದ್ಮನಾಭ ದಾಮೋದರ ॥೩॥
ವಾಸವಾರ್ಚಿತ ಸಂಕರುಷಣ
ವಾಸುದೇವ ಪ್ರದ್ಯುಮ್ನನೆ
ಶ್ರೀಶ ಅನಿರುದ್ಧ ಪುರುಷೋತ್ತಮ
ನೀ ಸಲಹೊ ಅಧೋಕ್ಷಜ ॥೪॥
ಶ್ರುತಿಗಗೋಚರ ನಾರಸಿಂಹಾ-
ಚ್ಯುತ ಜನಾರ್ದನುಪೇಂದ್ರನೆ
ಚತುರವಿಂಶತಿ ನಾಮದಲ್ಲಿಹ
ಚತುರ ಹರಿ ಶ್ರೀಕೃಷ್ಣನೆ ॥೫॥
**

Comments
Post a Comment