ಏನ ಬೇಡಲೊ ನಿನ್ನ ದೇವಾಧಿ ದೇವ vyasarajaru




  Restart mobile & try if the above audio is not playing


ಶ್ರೀ ವ್ಯಾಸರಾಜರ ಕೃತಿ  (ಇದೊಂದು ವ್ಯಾಜನಿಂದಾಸ್ತುತಿಯ ಹಾಡು)

ರಾಗ : ದೇಶ್     ಖಂಡಛಾಪು 


ಏನ ಬೇಡಲೊ ನಿನ್ನ ದೇವಾಧಿ ದೇವ llಪll


ಏನಹುದೊ ನಿನ್ನೊಳಗೆ ಮಹಾನುಭಾವ llಅ.ಪll


ಮನೆಯ ಬೇಡಲೆ ವನಧಿ ಹಾಸಿಗೆಯು ವಟಪತ್ರ

ವನಿತೆಯರ ಬೇಡಲೆ ಬ್ರಹ್ಮಚಾರಿ

ಘನ ಸಖ್ಯವನು ಬಯಸೆ ನೆನೆಯುವರ ಮನದಲಿಹೆ

ತಿನುವುದಕೆ ಕೇಳುವೆನೆ ನವನೀತಚೋರ ll1ll


ಒಡವೆಗಳ ಬಯಸೆ ಶಿಖಿ

ಪಿಂಛ ತುಳಸಿಪತ್ರ

ಕಡು ಸೈನ್ಯವನೆ ಬಯಸೆ ಗೋಪಾಲನು

ಬಿಡದೆ ರೂಪವ ಬಯಸೆ ನೀಲಮೇಘಶ್ಯಾಮ

ಉಡುವುದಕೆ ಕೇಳುವೆನೆ ಸ್ತ್ರೀವಸನ ಚೋರ ll2ll


ಶಕ್ತಿಯನು ಗೋಪಿಕಾ ಸ್ತ್ರೀಯರಲಿ ವ್ರಯಗೈದೆ

ಭಕ್ತಿಯನು ಸತ್ಯವಂತರಿಗಿತ್ತಿಹೆ

ಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವ

ಮುಕ್ತಿ ಕಾಂತೆಯ ಕೊಡು ಸುಖಿಪೆನೊ ಶ್ರೀಕೃಷ್ಣ ll3ll

**

Comments