ರಾಜವದನೆ ನೀ ಗುರುರಾಜರಿರುವ vijayadasaru



 Restart mobile & try if the above audio is not playing

vadirajara stuti

ರಚನೆ : ಶ್ರೀ ವಿಜಯದಾಸರು 

ರಾಗ : ಹಂಸಧ್ವನಿ    ಆದಿ ತಾಳ 


ರಾಜವದನೆ ನೀ ಗುರು-

ರಾಜರಿರುವ ಸಂಭ್ರಮವ ನೋಡೆ  IIಪII


ರಾಜಿಸುವ ಮುಖನ

ಪೂಜಿಸುವ ಯತಿವರನೆ   IIa. PII


ದೂಷಿತ ದುರ್ಜನರ

ತಾಸು ಬಾಳದಂತೆ ವಿ-

ಶೇಷದಿಂದ ಭಜಿಸುವರ

ಪೋಷಿಸುವ ಯತಿವರನೆ  II1II


ಪಾದ ನಂಬಿದವರಿಗೆ

ಮೋದವೀವ ದೇವನೆ

ಬೀದಿಬಿಡುವ ನಂಬಿದವರ

ವಾದಿರಾಜ ದೊರೆವರನೆ   II2II


ಅಜಪದಕೆ ಅರ್ಹನೆಂದು

ಗಜವರದನ ದಾಸನೆಂದು

ಭಜನೆ ಮಾಡುವ ನಿಜವ ಪೇಳುವ

ವಿಜಯವಿಠಲನ ಸೇವಕರಿವರೇ II3I

***

Comments