ಈರೇಳು ಲೋಕದೊಳಗೆ ಇವಗೆಣೆಗಾಣೆ vadirajaru

 



 Restart mobile & try if the above audio is not playing

ಶ್ರೀ ಶ್ರೀವಾದಿರಾಜರ ಕೃತಿ

ರಾಗ : ಜಂಜೂಟಿ    (ಅಶ್ವಧಾಟಿ)


ಈರೇಳು ಲೋಕದೊಳಗೆ ಇವಗೆಣೆಗಾಣೆ ಗೋವಿಂದರಾಯನಿಗೆ

ಮಾರನ್ನ ಪೆತ್ತ ಮನೋಹರ ಮೂರುತಿ ಗೋವಿಂದರಾಯನಿಗೆ ॥ಪ॥


ನೀಲನೀರದನಿಭ ನಿರ್ಮಲಕಾಯ ಗೋವಿಂದರಾಯನಿಗೆ

ಪಾಲಸಾಗರದಲ್ಲಿ ಪಡಿಸಿ ಪಾಲಿಪ ಗೋವಿಂದರಾಯನಿಗೆ   ॥೧॥


ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಗೋವಿಂದರಾಯನಿಗೆ

ಕುತ್ಸಿತರಾಯರ ಕೊಂದ ಕೊಡಲಿಯ ಗೋವಿಂದರಾಯನಿಗೆ  ॥೨॥


ರಘುಕುಲ ಯದುಕುಲ ಬುದ್ದ ಕಲ್ಕಿಯಾದ ಗೋವಿಂದರಾಯನಿಗೆ ಸೊಗಸುನುಡಿಗೆ ಮೆಚ್ಚ್ಚಿ ಶೋಕವ ಕಳೆವ ಶ್ರೀ ಗೋವಿಂದರಾಯನಿಗೆ   ॥೩॥


ಕಡೆಗೋಲ ಪಿಡಿದು ನಮ್ಮುಡುಪಿಲಿ ನೆಲೆಸಿದ ಗೋವಿಂದರಾಯನಿಗೆ

ಬಡನಡುವಿನ ಭಾವಕಿಯರೊಡನಾಡುವ ಗೋವಿಂದರಾಯನಿಗೆ  ॥೪॥


ವರ್ಣಿಸಿ ಪೊಗಳುವ ವಾದಿರಾಜಗೊಲಿದ ಗೋವಿಂದರಾಯನಿಗೆ

ಚಿನ್ನದ ಚೆಲುವನೆ ಜಯ ಹಯವದನ ಶ್ರೀ ಗೋವಿಂದರಾಯನಿಗೆ  ॥೫॥

**

Comments