ಕುಣಿಯುತ ನಲಿಯುತ ಬಾ ಶಂಕರ others



 Restart mobile & try if the above audio is not playing

song on Rudra Devaru

raga amrutavarshini


ಕುಣಿಯುತ ನಲಿಯುತ ಬಾ ಶಂಕರ | 

ಮಣಿಯುವೆ ನಿನ್ನಡಿಗಳಿಗೆ ನಾನೆರಗುವೆ ||ಪ||


ಢಮಢಮಢಮ ಎಂದು ಡಮರುಗ ದ್ವಾನಿಸಲು | 

ಠಣಠಣಠಣ ಎಂದು ವೃಷಭವು ನಲ್ಲಿಯೇ |

ಝಣ ತಕ ತಕ ಝಣ ತಾಕಿಟ ತಕ ಕಿಟ | 

ಝಣ ಎಂದು ನಂದಿ ಮೃದಂಗವ ಬಾರಿಸಲು ||೧||


ಹರ ಹರ ಹರ ಎಂದು ಗಣಗಳು ತುತಿಸೆ | 

ಪೊರೆಯಂದಹಿವಿದ್ದು ಗಂಗೆಯು ನಮಿಸೆ |

ಸಗಗ ಮಪ ಪ ನಿ ಸ ಸ್ವರಗಳ ಪಾಡುತ | 

ನಾರದ ತುಂಬುರ ಗಾನವ ಮಾಡಲು ||೨||


ವರಕಮಲೆಶನ ಚರಿತೆಯ ಜಗದೊಳು | 

ಪರಿಪರಿ ಭಾವದಿ ನರ್ತಿಸಿ ತೋರುತ |

ಪೊರೆಯುತ ಭಕುತರ ವರವೀಯುತ ಬಾ | 

ಗಿರಿಜಾಲಿಂಗಿತ ನಾಟ್ಯಾಚಾರ್ಯ ||೩||

***

Comments