ಇಂದು ಆರುತಿ ತಂದು ಬೆಳಗಿರೆ karparanarahari dasaru

 



Restart mobile & try if the above audio is not playing

ಶ್ರೀ ಕಾರ್ಪರ ನರಹರಿದಾಸರ ಕೃತಿ   ಲಕ್ಷ್ಮೀದೇವಿಯ ಆರತಿ ಹಾಡು 

ರಾಗ : ಆರಭಿ   ಮಿಶ್ರಛಾಪು 


ಇಂದು ಆರುತಿ ತಂದು ಬೆಳಗಿರೆ

 ಸಿಂಧುರಾಜನ ಕುವರಿಗೆ

ಸಿಂಧು ರಾಜನ ಕುವರಿಗೆ 

ಅರವಿಂದ ನಾಭನ ಮಡದಿಗೆ || ಪ ||


ಅಂದು ಸುರಕೃತ ಸಿಂಧು ಮಥನದಿ ಬಂದು

ನೋಡುತ ಕೃಷ್ಣಗೆ

ವಂದಿಸುತ ಪೂಮಾಲೆ ಹಾಕಿದ

ನಂದಗೋಪಕುಮಾರಗೆ || 1 ||


ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ 

ಸುರರೊಳು ಕೃಷ್ಣಗೆ

ಇಲ್ಲ ಸಮರೆಂತೆಂಬುದನು ಜಗಕೆಲ್ಲ 

ತೋರಿದ ದೇವಿಗೆ || 2 ||


ವಾರವಾರದಿ ಚಾರುಪದಯುಗ 

ಸಾರಿಭಜಿಸುವ ಜನರಿಗೆ 

ಆ-ಪಾರ ಸೌಖ್ಯಗಳೀವ 

ಕಾರ್ಪರ ನಾರಸಿಂಹನ ರಾಣಿಗೆ || 3 |

***


Comments