ವೇದವ್ಯಾಸರ ದಿವ್ಯಪಾದ ಪದುಮಯುಗಲ karparaharahari dasaru
Restart mobile & try if the above audio is not playing
ಶ್ರೀ ಕಾರ್ಪರ ನರಹರಿದಾಸ ಕೃತಿ ಶ್ರೀ ವೇದವ್ಯಾಸ ದೇವರನ್ನು ಕುರಿತು
ರಾಗ: ಮೋಹನ ಮಿಶ್ರಛಾಪು (ಸಂಪ್ರದಾಯ ಧಾಟಿ )
ವೇದವ್ಯಾಸರ ದಿವ್ಯಪಾದ ಪದುಮಯುಗಲ
ಆರಾಧಿಸುತಿರು ಮನುಜಾ ||ಪ||
ವೇದಗಳಿಗೆ ಸಮ್ಮತವಾದ ಪುರಾಣಗಳ
ಸಾದರದಲಿ ರಚಿಸಿ ಮೋದವ ಬೀರಿದ ||ಅ.ಪ||
ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು
ಸುರಮುನಿ ಪ್ರಾರ್ಥನದಿ
ಪರಮ ಮಂಗಲ ವೀರವರ ಭಾಗವತ ಗ್ರಂಥ
ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ||೧||
ವಾಸಿಪ ಮುನಿಗುಣ ಭೂಷಿತ ಬದರಿಯೋಳ್
ತೋಷ ತೀರ್ಥರ ಕರೆದು
ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ
ಭಾಷ್ಯವ ರಚಿಸೆಂದಾದೇಶವ ನೀಡಿದ ||೨||
ಅರಿದರಾದ್ಯಯುಧ ಧರಿಸಿ ಷೋಡಶ ಸಂಖ್ಯ
ಕರಗಳಿಂದಲಿ ಶೋಭಿತ
ಶರಣು ಜನಕೆ ಸುರತರು ವೆನಿಸಿ ಧರೆಯೊಳು
ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ||೩||
***

Comments
Post a Comment