ಏನು ಬರುವುದೊ ಸಂಗಡೇನು ಬರುವುದೊ kanaka dasaru
Restart mobile & try if the above audio is not playing
ಶ್ರೀ ಶ್ರೀಕನಕದಾಸರ ಕೃತಿ
ರಾಗ : ಹಿಂದೋಳ ಏಕಾತಾಳ
ಏನು ಬರುವುದೊ ಸಂಗಡೇನು ಬರುವುದೊ
ದಾನಧರ್ಮ ಮಾಡು ಬಹು ನಿದಾನಿ ಎನಿಸಿಕೊಳ್ಳೊ ಮನುಜ | ||ಪ||
ಹೆಂಡರಿಲ್ಲ ಮಕ್ಕಳಿಲ್ಲ ಮಂಡೆ ತುಂಬ ಬಂಧುಬಳಗ
ಕಂಡು ಬಿಡಿಸಿಕೊಂಬರಾರೊ ದಿಂಡಿಯಮನ ದೂತರೆಳೆಯೆ
ಬಂಡಿ ತುಂಬ ಇದ್ದ ಧನವು ಹಿಂದೆ ಉಳಿವುದಲ್ಲೊ ನಿನ್ನ
ಪೊಂದಿಕೊಂಡು ಬರುವ ವಸ್ತು ಕೀರ್ತಿ ಅಪಕೀರ್ತಿ ಎರಡೆ | ||1||
ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿ
ಘನ್ನವಾಗಿ ಬಾಯಬಿಡುತ ಬಂದೆ ಮೋಹವಾ
ಸನ್ನುತದಲಿ ಪರಹಿತಾರ್ಥ ಮಾಡಿ
ಪುಣ್ಯ ಪಡೆಯಿನಿತು ಮುಂದೆ ಕಿರುಕುಳದ ಕೂಪದಲ್ಲಿ
ಕೆಡಲು ಬೇಡ ಮನುಜ| ||2||
ಬತ್ತಲಿಂದ ಬರುತಿಹರು ಬತ್ತಲಿಂದ ಪೋಗುತಿಹರು
ಕತ್ತಲೆ ಕಾಲ ಬೆಳಕು ಮಾಡೆ ಹೊತ್ತ ಕಳೆದರು
ಸತ್ತರಿಲ್ಲ ಹೆತ್ತರಿಲ್ಲ ಹೊತ್ತುಕೊಂಡು ಹೋದರಲ್ಲೆ
ಮತ್ತೆ ದೇಹ ಮಣ್ಣುಗೂಡಿದಂತೆ ಕೆಡಲು ಬೇಡ ಮನುಜ | ||3||
ಕಟ್ಟಲಿಲ್ಲ ಬಿಚ್ಚಲಿಲ್ಲ ಕಷ್ಟಪಟ್ಟು ಬಾಳಲಿಲ್ಲ
ಸುಟ್ಟುಸುಟ್ಟು ಸುಣ್ಹದ್ಹರಳು ಆಯಿತೀ ಕಾಯ
ಬಿಟ್ಟು ಹೋಗುವಾಗ ಬೊಟ್ಟ ಬಟ್ಟೆ ನಿನಗೆ ಹೊಂದಲಿಲ್ಲ
ದೃಷ್ಟಿ ನೋಟ ಕಟ್ಟಕಡೆಗೆ ಬಟ್ಟ ಬಯಲಾಗುತಿದೆ | ||4||
ಗುರುವದೋರಿನಿಂದ ನೀನು ಬರಿದೆ ಕಾಲ ಕಳೆದೆ
ಮುಂದರಿದು ನೋಡು ನರರ ತನುವು ದೊರಕಲರಿಯದು
ನೆರೆ ಮಹಾಮೂರ್ತಿ ಒಡೆಯ ಪರಮಗುರು ಚೆನ್ನಾದಿಕೇಶವ
ಚರಣ ಭಜಿಸಿ ಚಂಚಲವಳಿದು ವರವ ಪಡೆದು ಹೊಂದು ಮುಕುತಿ | ||5||
-imageonline.co-merged%20(1).jpeg)
Comments
Post a Comment