ಗೋವಿಂದ ನಿನ್ನ ಪಾದವ ಕಂಡೆ gurushreesha vittalaru
Restart mobile & try if the above audio is not playing
ಶ್ರೀಗುರುಶ್ರೀಶವಿಠಲರ ಕೃತಿ
ಏಕತಾಳ ರಾಗ : ಆರಭಿ
ಗೋವಿಂದ ನಿನ್ನ ಪಾದವ ಕಂಡೆ ॥ಪ॥
ಆವ ಜನ್ಮದ ಪುಣ್ಯ ಫಲಿಸಿತೊ
ಪಾವನ ಮೂರ್ತಿಯ ಪಾದವ ಕಂಢೆ ॥೧॥
ಗಂಗೆಯ ಪಡೆದ ಜಗಂಗಳ ಪಾಪವ
ಹಿಂಗಿಸುತೀರ್ಪ ಶ್ರೀರಂಗ ಮೂರ್ತಿಯ ॥೨॥
ಬಲಿಯ ದಾನವ ಬೇಡಿ ಶಿಲೆಯನ್ನುದ್ಧರಿಸಿದ
ತಲೆಯಲಿ ಗಂಗೆಯ ಪೊತ್ತವಗೊಲಿದ ॥೩॥
ದರುಶನ ಮಾತ್ರದಿ ದುರಿತಗಳೋಡಿಸಿ
ಹರುಷ ಸುರಿಸುವ ಗುರುಶ್ರೀಶವಿಠಲ ॥೪॥
***
1

Comments
Post a Comment