ಕಾಯೊ ಕಾಯೊ ಕಾಮಿತ ಫಲದ ಕಾಯೊ vyasatatwajna teertharu kayo kayo kamita phalada

Restart mobile & try if the above audio is not playing

ಶ್ರೀ ಶ್ರೀವ್ಯಾಸತತ್ವಜ್ಞತೀರ್ಥರ ಕೃತಿ

ರಾಗ : ರೇವತಿ    ಆದಿತಾಳ


ಕಾಯೊ ಕಾಯೊ ಕಾಮಿತ ಫಲದ ಕಾಯೊ  ॥ಪ॥


ಕಾಯೊ ಕಾಯೊ ಎನ್ನ ಕಾಮಜನಯ್ಯನೆ

ಕಾಯದಿದ್ದರೆನ್ನ ಕಾಯ್ವವರಾರೊ ॥ಅ.ಪ॥


ಎಂದೆಂದಿನ ಕರ್ಮಗಳನೆಣಿಸುತಲಿ

ಕುಂದಿಸಿ ಕುಂದಿಸಿ ಬಂಧಿಪರೇನೋ ॥೧॥


ತಾಳಲಾರೆ ಈ ಕಾಲನ ಬಾಧೆಯು

ಬೀಳುವೆ ನಿನ್ನಯ ಕಾಲಿಗೆ ಸ್ವಾಮಿ ॥2॥


ಆಲಸ ಮಾಡದೆ ಆರ್ತಿಗಳೋಡಿಸಿ

ಪಾಲಿಪುದೆನ್ನನು ಪಾವನ ಮೂರ್ತೆ ॥೩॥


ಮಾಡಿದ ಪಾಪಗಳೋಡಿಸಿ ಸುಖದಿಂ

ದಾಡಿಸು ಕಣ್ಣಿಗೆ ಕಾಣಿಸಿಕೊಂಡು ॥೪॥


ವಾಸುದೇವವಿಟ್ಠಲ ನೀ ಎನಗಿನ್ನು

ವಾಸಿ ಮಾಡಿಸಿ ಕೀರ್ತಿಯ ಪಡೆಯೊ ॥೫॥

** ಕಾಯೋ 

Comments