ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ vyasatatwajna teertharu idane beduvenayya odagi

Restart mobile & try if the above audio is not playing

ಶ್ರೀ ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಕೃತಿ   ( ಶ್ರೀ ಐಜಿ ಸ್ವಾಮಿಗಳು )


ರಾಗ ಸಾವೇರಿ       ಮಿಶ್ರಛಾಪುತಾಳ 


ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ ॥ ಪ ॥

ಬದಲು ನಾನೊಲ್ಲೆನೊ ವಿದಿತವೇದ್ಯ ಕೃಷ್ಣ ॥ ಅ ಪ ॥


ಕ್ಷಣ ಒಂದಗಲಿರಲಾರೆ ನಿನ್ನವರನು ಬಿಡೆ ।

ಕುಣಿಕುಣಿವೆನೊ ನಿನ್ನವರಂದದಿ ॥

ಗುಣತ್ರಯವಾರಣ ನಿನ್ನ ವಾರತೆ ಯಿದೆ ।

ಒಣಹರಟೆಗಳನ್ನು ಕೇಳಲೊಲ್ಲೆ ॥ 1 ॥


ನೀಚಜನರಂಗಳ ಸಂಗವ ಕೊಡದಿರೊ ।

ವಾಚಾದಿಂದನ್ಯರಿಗಲ್ಪರಿಸಬ್ಯಾಡ ॥

ಸೂಚಿಸೊ ನಿನ್ನಯ ಗುಣಂಗಳನ್ನೇವೆ ।

ಯಾಚಿಪೆ ಇದನೇ ಮತ್ತಿದನೇ ಮುರಾರೀ ॥ 2 ॥


ಈಶ ನಿನ್ನಯ ಕಥೆ ಕೇಳದ ಬಹಳಾಯು

ಕಾಸು ಬಾಳದು ಕೇಳೋ ಕರುಣಾಬ್ಧಿಯೆ ॥

ತಾಸು ಒಂದಾದರು ಅವನೇವೇ ಸುಜೀವಿ ।

 ವಾಸುದೇವವಿಠಲ ನಿನ್ನವರವನೂ ॥ 3 ॥

**

Comments