ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ vyasarajaru bidade nimmanu pujisuva dasarige
Restart mobile & try if the above audio is not playing
ಶ್ರೀ ಶ್ರೀವ್ಯಾಸರಾಯರ ಕೃತಿ
ರಾಗ : ಚಕ್ರವಾಕ ಆದಿತಾಳ
ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ ॥ಪ॥
ತಡೆಯದೆ ವೈಕುಂಠವಹುದು ಸೋಜಿಗವೆ ॥ಅ.ಪ.॥
ಬಡತನವಾಗೆ ಬಾಲತ್ವದ ಸಖನೆಂದು
ಮಡದಿ ಪೋಗೆನ್ನೆ ಕುಚೇಲ ಬಂದು
ಪಿಡಿತುಂಬ ಅವಲಕ್ಕಿಯ ತಂದು ಕೊಡಲಾಗ
ಕಡು ಮೆಚ್ಚಿ ಅವನಿಗೆ ಸೌಭಾಗ್ಯವನಿತ್ತೆ ॥೧॥
ಷಡುರಸಾಯನದೂಟ ರಚಿಸಿರಲು ಕುರುಪತಿಯು
ಬಡವಿದುರನ ಮನೆಯ ಕುಡುತೆ ಪಾಲ್ಕುಡಿದು
ಪೊಡವಿಯನು ಮೆಟ್ಟಿ ಪಾಪಿಷ್ಠನನು ಕೆಡಹಿದೆ
ಬಡವರಾಧಾರಿಯೆಂಬ ಬಿರುದನು ಪಡೆದೆ ॥೨॥
ಕಡಲಶಯನನೆ ಕುಬುಜೆ ತಂದ ಗಂಧಕೆ ಮೆಚ್ಚಿ
ಒಡನೆ ಅವಳನು ಸುರೂಪಿಯ ಮಾಡಿದೆ
ಸಡಗರದಿ ಅನವರತ ಬಿಡದೆ ಪೂಜಿಸುವಂಥ
ದೃಢಭಕ್ತಗೇನುಂಟು ಏನಿಲ್ಲ ಸಿರಿಕೃಷ್ಣ ॥೩॥
**

Comments
Post a Comment