ನಿನ್ನ ಮಗನೇನೆ ಗೋಪಿ ಚೆನ್ನಾರಿ vyasarajaru ninna maganene gopi
Restart mobile & try if the above audio is not playing
ಶ್ರೀ ಶ್ರೀವ್ಯಾಸರಾಜರ ಕೃತಿ
ಬಿಲಹರಿ ರಾಗ ಆದಿತಾಳ
ನಿನ್ನ ಮಗನೇನೆ ಗೋಪಿ ॥ ಪ ॥
ಚೆನ್ನಾರಿ ಚೆಲುವ ಉಡುಪಿನ ಕೃಷ್ಣರಾಯ ॥ ಅ ಪ ॥
ಮುಂಗುರುಳು ಮುಂದಲೆಗೆ ಭಂಗಾರದರಳೆಲೆ ।
ರಂಗು ಮಾಣಿಕದ ಉಂಗುರವನಿಟ್ಟು ॥
ಪೊಂಗೆಜ್ಜೆ ತೊಡರು ಅಂದಿಗೆ ಘಲು ಘಲುರೆನೆ ।
ಅಂಗಳದೊಳಾಡುವನು ಈ ಮುದ್ದುಬಾಲ ॥ 1 ॥
ಕಟಿವಾಯಿ ಬೆಣ್ಣೆ ಕಾಡಿಗೆ ಕಣ್ಣು ಕಟಿ ಸೂತ್ರ ।
ಪಟವಾಳಿ ಕೌಪೀನ ಕೊರಳಲ್ಲಿ ಪದಕ ॥
ಸಟಿಯಿಲ್ಲ ಬ್ರಹ್ಮಾಂಡ ಉದರದಲಿಂಬಿಟ್ಟು ।
ಮಿಟಮಿಟನೆ ನೋಡುವನು ಈ ಮುದ್ದುಬಾಲ ॥ 2 ॥
ಹರಿವ ಹಾವನು ಕಂಡು ಹೆಡೆ ಹಿಡಿದು ಆಡುವ ।
ಕರುವಾಗಿ ಆಕಳ ಮೊಲೆಯುಂಬುವ ॥
ಹಿರಿದಾಗಿ ನೋಡಲು ಅಂತರಂಗದ ಸ್ವಾಮಿ ।
ಧರೆಯೊಳಂಬುಧಿ ತೀರ ಉಡುಪಿನ ಕೃಷ್ಣ ॥ 3 ॥
**

Comments
Post a Comment