ಬೆಳಗಿದರಾರುತಿಯ ಶ್ರೀಕೃಷ್ಣಗೆ ರುಕ್ಮಿಣಿ vyasarajaru belagidararutiya srikrishnage
Restart mobile & try if the above audio is not playing
ಶ್ರೀ ಶ್ರೀವ್ಯಾಸರಾಜರ ಕೃತಿ
ರಾಗ : ಅಭೇರಿ (ಸಂಪ್ರದಾಯದ ಧಾಟಿ)
ಬೆಳಗಿದರಾರುತಿಯ ಶ್ರೀಕೃಷ್ಣಗೆ ರುಕ್ಮಿಣಿ ಬೆಳಗಿದಳು ॥ಪ॥
ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆ ಕಾಯ್ದ
ಗೋಪಾಲಕೃಷ್ಣನೆ ಎನಗೆ ವರನಾಗಬೇಕೆಂದು॥೧॥
ಮಧುರೆಗೆ ಪೋಗಿ ಮಾವ ಕಂಸನ ಕೊಂದ
ಮಾಧವ ಕೃಷ್ಣ ಎನಗೆ ವರನಾಗಬೇಕೆಂದು॥೨॥
ಕಡಗೋಲನೆ ಪಿಡಿದು ಕಡುಮುದ್ದು ಸುರಿಯುವ
ಉಡುಪಿಯ ಕೃಷ್ಣ ಎನಗೆ ವರನಾಗಬೇಕೆಂದು॥೩॥
**

Comments
Post a Comment