ನಾನೇ ಸಜ್ಜನನಾದಡೆ ಇಂಥ ಹೀನ sripadarajaru nane sajjannadade intha


Restart mobile & try if the above audio is not playing


ಶ್ರೀ ಶ್ರೀಪಾದರಾಜರ ಕೃತಿ

ರಾಗ : ಧರ್ಮವತಿ    ಆದಿತಾಳ


ನಾನೇ ಸಜ್ಜನನಾದಡೆ ಇಂಥ |

ಹೀನ ವಿಷಯಗಳಿಗೆರಗುವೆನೇನಯ್ಯ ||ಪ||


ನಿರುತದಿ ಪರರ ನಿಂದಿಸುತಿಹೆನೆ 

ಗುರುಹಿರಿಯರು ಸಜ್ಜನರೆನ್ನದೆ |

ಹರಿ ಪರದೈವವೆಂದರಿತು ಭಜಿಸದೆ |

ಪರರ ವಡವೆಗಳ ಬಯಸುವೆನೇನಯ್ಯ ||೧||


ಚಿತ್ತವ ಪುರುಷೋತ್ತಮನ ಮನದಲ್ಲಿಡದೆ‌ |

ಉತ್ತಮರಾದವರೊಡನಾಡದೆ |

ತತ್ವ ವಿಚಾರವ ಮಾಡದೆ ನಾನು 

-ನ್ಮತ್ತರ ಸಂಗವ ಮಾಡುವೆನೇನಯ್ಯ ||೨||


ಹೇಯ ಶರೀರವ ಪೋಷಿಸಿಕೊಂಡು |

ಉಪಾಯವ ಚಿಂತಿಸಿ ಬಳಲುವೆನು 

ರಾಯರ ಶರಣರ ಸಲಹುವ

ರಂಗವಿಠಲನ ಬಿಡುವೆನೇನಯ್ಯ ||೩||

**

Comments