ಬಾರಯ್ಯ ಎನ್ನ ಮನ ಮಂದಿರಕೆ vyasarajaru barayya enna mana mandirake

Restart mobile & try if the above audio is not playing

ಶ್ರೀ ಶ್ರೀವ್ಯಾಸರಾಯರ ಕೃತಿ

ರಾಗ : ಮೋಹನ    ಆದಿತಾಳ


ಬಾರಯ್ಯ ಎನ್ನ ಮನ ಮಂದಿರಕೆ ॥ಪ॥

ಬೇರೊಂದು ಯೋಚನೆ ಮಾಡದೆ ಸಿರಿಪತಿ ॥ಅ.ಪ॥


ನಾ ರಾಜಸ ಬುದ್ಧಿಯೆಂಬಿಯ ನಿನ್ನ

ಕಾರುಣ್ಯದ ಸೋನೆ ಸೊರಗುವುದೆ

ವಾರ ವಾರಕೆ ಮೇಘವಾರಿಯ ಕರೆದರೆ

ಧಾರುಣಿಗೆ ಕ್ಷಾಮ ಬರುವುದೆ ಕೃಷ್ಣ ॥೧॥


ತಾಮಸ ಬುದ್ಧಿಯೆಂಬಿಯ ನಿನ್ನ

ಶ್ರೀಮೂರ್ತಿ ಹೊಳೆದರೆ ತಮವಡಗದೆ

ಶ್ರೀ ಮನೋಹರನೆ ಭಾನು ಉದಿಸಿದರೆ

ತಾಮಸವಡಗದೆ ಜಗದೊಳು ಕೃಷ್ಣ ॥೨॥


ನಾ ದೋಷಿ ಕಠಿಣನೆಂತೆಂಬೆಯ ನಿನ್ನ

ಪಾದಪದುಮ ಪಾಪಹರವಲ್ಲವೆ

ಆ ದುಷ್ಟ ಶಿಲೆ ಸೋಕೆ ಋಷಿಪತ್ನಿಯಾದಳು

ನೀ ದಯಮಾಡೆ ನಾ ನೀಚನೆ ಸಿರಿಕೃಷ್ಣ ॥೩॥

**

Comments