ನಮೋ ನಮೋ ಜಯ ಜಯ ತುಂಗಭದ್ರೆ vijaya dasaru namo namo jaya jaya tungabhadre
Restart mobile & try if the above audio is not playing
ಶ್ರೀ ಶ್ರೀವಿಜಯದಾಸರ ಕೃತಿ
ತುಂಗಾಭದ್ರಾನದಿಯ ಸ್ತೋತ್ರ ಪದ.
ರಾಗಮಾಲಿಕೆ ಆದಿತಾಳ
ಮುಖಾರಿ
ನಮೋ ನಮೋ ಜಯ ಜಯ ತುಂಗಭದ್ರೆ
ನಮಿತರನು ಪಾಲಿಸುವ ಸದ್ಗುಣ ಸಮುದ್ರೆ ॥ಪ॥
ವೈರೋಚ ನಗರಿಯಲಿ ವಿಧಾರುಣಿಯ ರೋಚಕನು
ಮೀರಿ ದೇವಾದಿಗಳಿಗಂಜದಿರಲು
ಘೋರ ರೂಪವ ತಾಳಿ ಅವನ ಕೊಲ್ಲಲು ಹರಿಯ
ಮೋರೆ ಕಿರಿಬೆವರಿಡಲು ಮಹಾ ಹರುಷದಿಂದ ॥೧॥
ಅಠಾಣ
ರೂಢಿಯೊಳಗೆಲ್ಲ ಸಮಸ್ತ ನದಿ ಉದಕ
ನೋಡಿದರೆ ರುಚಿಕರವಿಲ್ಲವೆಂದೂ
ಧಾಡಿಯಲಿ ಧರಿಸಿದನು
ಸುರರು ಕೊಂಡಾಡುತಿರೆ
ಈಡ್ಯಾರು ನಿನ್ನ ಮಹಿಮೆಗೆ ವರಹತನಯೇ ॥೨॥
ನಾಟಕುರಂಜಿ
ಸಲಿಲವೇ ಹರಿಯಾದ ಶಿವನೀಗ ಶಿಲೆಯಾದ
ಬಲು ಮುನಿಗಳು ಮಳಲವಳಗಿದ್ದರೂ
ಜಲಜ ಸಂಭವನು ತೃಣನಾದ ಬಳಿಕ ವಿಷ್ಣು
ಕೆಲವುಕಾಲ ನಿಲಿಸಿದರು ನಿನ್ನೊಳಗೆ ಗಂಗೆ ॥೩॥
ವಾಸಂತಿ
ವೇದಾದ್ರಿಯಲಿ ಜನಿಸಿ ನರಸಿಂಹ ಕ್ಷೇತ್ರದಲಿ
ಭೇದವಿಲ್ಲದಲೆ ಸಂಗಮವೆನಿಸೀ
ಆದರಣೆಯಿಂದ ಹರಿಹರ ಪಂಪ ಬಲಗೊಂಡು
ಮೂದಲಿಸಿ ಕೃಷ್ಣೆಯೊಳು ಬೆರೆದೆ ಕೂಡಲಿಯಲ್ಲಿ॥೪॥
ಬಹುದಾರಿ
ತುಂಗೆ ತುಂಗೆ ಎಂದು ಸ್ಮರಿಸಿದ ಜನರಿಗೆ
ಉತ್ತಂಗ ಗತಿಯಾಗುವುದು ಪಾಪವಳಿದು
ಮಂಗಳ ಮೂರುತಿ ವಿಜಯವಿಠ್ಠಲನ ಚರ-
-ಣಂಗಳಲಿ ಇದ್ದವರ ಸತತ ಪೊರೆವುದು ದೇವಿ ॥೫॥
**

Comments
Post a Comment