ಮಧ್ವಮುನಿಯೆ ನಿನಗೆದ್ದು ಕರಗಳ ಮುಗಿವೆ vijaya dasaru madhwamuniye ninageddu karagala

Restart mobile & try if the above audio is not playing



 ಶ್ರೀ ವಿಜಯದಾಸರ ಕೃತಿ 

ರಾಗ : ಭೈರವಿ   ದಿತಾಳ


ಮಧ್ವಮುನಿಯೆ ನಿನಗೆದ್ದು ಕರಗಳ ಮುಗಿವೆ |

ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ||pa||


ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ |

ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ |

ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ |

ನಳಿನನಾಭನ ಚರಣ ಮನದಲಿಟ್ಟ ಪರಣಾ ||1||


ಪಂಚ ಭೇದವೆ ಸತ್ಯ ಐಕ್ಯವೆಂಬದು ಮಿಥ್ಯ |

ಪಂಚವಿರಹಿತ ಹರಿ ಪರನೆಂದು ಸಾರೀ |

ಚಂಚಲವ ಪರಿಹರಿಸಿ ಮರುತ ಮತ ಉದ್ಧರಿಸಿ |

ಮಿಂಚುವ ಹೇಮದ ಕಾಯ ಸುಖ ತೀರ್ಥರಾಯಾ||2||


ಸುರರಾದಿಗಳ ಮಣಿಯ ಆರಾರು ನಿನಗೆಣೆಯೇ |

ಅರಸಿದರೆ ಕಾಣೆ ಹರಿ ಪದಗಳಾ ಆಣೆ |

ಶಿರಿ ವಿಜಯವಿಠ್ಠಲನ್ನ ಭಜಿಸುವ ಯತಿರನ್ನ |

ಶರಣಪಾಲಕ ಪೂರ್ಣಪ್ರಜ್ಞ ಗುಣಪೂರ್ಣ ||3|

**

Comments