ಮಧ್ವ ಸರೋವರದ ಸ್ನಾನವ ಮಾಡಿರೊ vijaya dasaru madhwa sarovarada snanava


Restart mobile & try if the above audio is not playing

ಶ್ರೀ ಶ್ರೀವಿಜಯದಾಸಾರ್ಯ ವಿರಚಿತ

ಉಡುಪಿಯ ಮಧ್ವಸರೋವರದ ಸ್ನಾನದ ಮಹಾತ್ಮೆ.

ರಾಗ : ಅಭೋಗಿ   ಆದಿತಾಳ


ಮಧ್ವ ಸರೋವರದ ಸ್ನಾನವ ಮಾಡಿರೊ

ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ||pa||


ಕೃತಯುಗದಲಿ ಇದೇ ಅನಂತ ಸರೋವರ

ತ್ರೇತಾಯುಗದಲ್ಲಿ ವರುಣತೀರ್ಥ

ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ-

ನ್ನತ ಕಲಿಯುಗದಲ್ಲಿ ಮಹಾ ತೀರಿಥ ||1||


ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ-

ಸ್ತರವಾಗಿ ಕೊಳುತಿಪ್ಪಳುಪೇಕ್ಷದಿ

ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ

ನಿರುತದಲ್ಲಿ ತೀವ್ರಗತಿ ಕೊಡುವಳೂ||2||


ಸಕಲ ವೇದಶಾಸ್ತ್ರ ಓದಿದವನಾದರೂ

ಶಕುತಿವಂತನಾಗಿ ಇದ್ದನಾಗೆ

ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು

ಶಕಲ ಮತಿಯಲಿ ಮಹಾನರಕ ಭುಂಜಿಸುವಾ ||3||


ಒಂದೆ ಮಜ್ಜನ ಮಾಡೆ ಅನಂತ ಜನುಮಕೆ

ತಂದು ಕೊಡುವದು ನರಗೆ ಮಿಂದ ಫಲವೊ

ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ

ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು ||4||


ಆದಿಯಲ್ಲಿ ಇದ್ದ ಲಿಂಗ ಶರೀರವು

ಛೇದಿಸುವದಕೆ ಇದೇ ಸ್ನಾನವೆನ್ನಿ

ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ

ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ||5||

**

Comments