ತುಂಗಭುಜಂಗನ ಫಣೆಯಲಿ ಕುಣಿದನು vidyaprasanna teertharu tungabhujangana phaneyali kunidanu
Restart mobile & try if the above audio is not playing
ಶ್ರೀ ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ
ರಾಗ : ಶಹನ ಆದಿತಾಳ
ತುಂಗಭುಜಂಗನ ಫಣೆಯಲಿ ಕುಣಿದನು ll ಪ ll
ಮಂಗಳ ಮೂರುತಿ ರಂಗ ಶ್ರೀಕೃಷ್ಣನು ll ಅ ಪ ll
ಕಿಣಿಕಿಣಿ ತಾಳ ಝೇಂಕರಿಸುವ ತಂಬೂರಿ l
ಕಣಕಣವೆಂಬ ಸುನಾದ ಮೃದಂಗವ l
ಝಣಝಣಿಸುವ ಕಂಜರಿ ನಾದಗಳನು l
ಅನುಸರಿಸುತ ಧಿಕ್ಕಿಟತಧಿಕ್ಕಿಟ ಎಂದು ll 1 ll
ಗಗನವ ತುಂಬಿ ತುಂಬುರು ಗಂಧರ್ವರು l
ಶಹನ ಅಠಾಣ ಶಂಕರಾಭರಣಗಳಿಂದ l
ಸೊಗಸಿನಿಂದಲಿ ಗುಣಗಾನವ ಮಾಡಲು l
ನಗಧರ ಕೃಷ್ಣನು ನಗುಮೊಗದಿಂದಲಿ ll 2 ll
ಪನ್ನಗಸತಿಯರು ಚಿನ್ನದ ತವಕದಿ l
ಸನ್ನುತಿಸುತ ಆರತಿಯ ಬೆಳಗುತಿರೆ l
ಉನ್ನತ ಗಗನದಿ ಸುಮನಸರೆಲ್ಲ ಪ್ರ l
ಸನ್ನ ಹರಿಗೆ ಸುಮಮಳೆ ಗರೆಯುತಲಿರೆ ll 3 ll
**

Comments
Post a Comment