ಹರಿ ಭಕುತಿಯ ಪೊಂದಿಸೆಲೋ ಕರುಣದಿ vidyaprasanna teertharu hari bhakutiya pondiselo karunadi
Restart mobile & try if the above audio is not playing
ಶ್ರೀ ವಿದ್ಯಾಪ್ರಸನ್ನ ತೀರ್ಥರ ಕೃತಿ
ರಾಗ : ಪಂತುವರಾಳಿ ಆದಿತಾಳ
ಹರಿ ಭಕುತಿಯ ಪೊಂದಿಸೆಲೋ
ಕರುಣದಿ ಗಿರಿಜಾರಮಣ ಗಿರಿಜಾರಮಣ IIಪII
ನರಹರಿಯಲಿ ವರಭಕುತನೆಂದರಿಯರು
ನಿನ್ನ ದುರುಳ ಜನರು IIಅ.ಪII
ಗಂಗೆಯ ಶಿರದಲಿ ಧರಿಸಿ
ಭುಜಂಗನ ಕೊರಳಲ್ಲಿ ಪೊಂದಿದ
ಮಂಗಳ ವರ ಶೈಲಜೆಯ
ಅಪಾಂಗರಸ ಅನಂಗವೈರಿ II೧II
ಶ್ರೀಹರಿಯಾಜ್ಞೆಯನು ವಹಿಸಿ
ಮೋಹ ಶಾಸ್ತ್ರಗಳನು ರಚಿಸಿ
ಈ ಮಹಿಯೊಳು ದುರುಳರನು
ಮೋಹಿಸಿದ ಮಹಾದೇವ II೨II
ಪನ್ನಗ ಭೂಷಣ ಶಂಕರ
ಷಣ್ಮುಗಪಿತ ಚಂದ್ರಮೌಳಿ
ಸನ್ನುತಿಸುವೆ ನಿನ್ನ ಮನದಿ
ಎನ್ನಲಿ ದಯದಿಂ ಪ್ರಸನ್ನ II೩II
**

Comments
Post a Comment