ಬನ್ನಿರಿ ಬನ್ನಿರಿ ಪುರಜನರೆಲ್ಲರು vidyaprasanna teertharu baniri banniri purajanarellaru

Restart mobile & try if the above audio is not playing

ಶ್ರೀ ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ  ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ 

ರಾಗ : ಅಮೃತವರ್ಷಿಣಿ   ಆದಿತಾಳ


ಬನ್ನಿರಿ ಬನ್ನಿರಿ ಪುರಜನರೆಲ್ಲರು

ಕೃಷ್ಣನ ದರುಶನಕೆ ಪೋಗುವ ॥ಪ॥


ಕೃಷ್ಣನು ಜನಿಸಿದ ಈ ದಿನದಲ್ಲಿ

ಇಷ್ಟವ ಪ್ರಾರ್ಥಿಸಲು ಪೋಗುವ ॥ಅ.ಪ॥


ದುಂದುಭಿ ನಾದವು ಕೇಳುತಿದೆ ಬಲು

ಮಂದಿಯ ತಂಡವು ಹೋಗುತಿದೆ

ಕಂದನ ರೂಪದಿ ಬಂದಿಹ ಆನಕ

ದುಂದುಭಿ ಕುವರನ ಸಂಭ್ರಮ ನೋಡಲು ॥೧॥


ಪೇಳಿರಿ ನಿಮ್ಮಯ ಕೊರತೆಗಳೆಲ್ಲವ

ಕೇಳಿರಿ ವರಗಳ ಧೈರ್ಯದಲಿ

ಬಾಲನು ಸುಲಭದಿ ಒಲಿಯುವ ಒಳ್ಳೆಯ

ಕಾಲವಿದೆಲ್ಲರಿಗೆ ಬೇಗನೆ ॥೨॥


ಜನುಮ ಜನುಮಗಳ ಪುಣ್ಯದ ರಾಶಿಯು

ಜನುಮಾಷ್ಟಮಿ ದಿನದಿ ಲೋಕಕೆ

ಜನುಮಾದ್ಯಷ್ಟಕದಾತನ ದರುಶನ

ಮನಕೆ ಪ್ರಸನ್ನತೆ ಕೊಡುವುದು ಪೋಗುವ ॥೩॥

**

Comments