ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ vidya ratnakara teertharu krishnamuruti enna rakshisai

Restart mobile & try if the above audio is not playing

ಶ್ರೀ ಶ್ರೀವಿದ್ಯಾರತ್ನಾಕರತೀರ್ಥರ ಕೃತಿ

ರಾಗ : ಷಣ್ಮುಖಪ್ರಿಯ  ಆದಿತಾಳ


ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ

ಕೃಷ್ಣಮೂರುತಿ ॥ಪ॥


ನಾಗೇಂದ್ರಶಯನನೆ ನಾಗೇಂದ್ರ ಮರ್ದನನೆ

ನಾಗೇಂದ್ರಗೊಲಿದವನ್ಹಾಗೆ ನಾನಲ್ಲವೇನೊ 1


ತಾಪಸಸತಿ ಶಿಲಾರೂಪವ ಪೊಂದಿರಲು

ಶಾಪ ಬಿಡಿಸಿ ಅವಳ ಕಾಪಾಡಲಿಲ್ಲವೇನೊ 2


ಆ ನೀಚನಿಂದ ಯಜ್ಞಸೇನೆಗೆ ಬಂದ ಮಾನ

ಹಾನಿ ತಪ್ಪಿಸಿ ಅಭಿಮಾನಿಸಿ ರಕ್ಷಿಸಿದ 3

ಇಂದಿರೆಯರಸನೆ ವಂದಿಸಿ ಬೇಡುವೆನೊ

ಎಂದಿಗು ಎನ್ನ ಹೃದಯಮಂದಿರ ಬಿಡದಿರೊ 4


ವರನಾಮಗಿರಿ ಸಿರಿನರಹರಿಮೂರ್ತಿಯ

ಚರಣಸೇವಕನೆಂದು ಕರುಣ ಎನ್ನೊಳಗಿಟ್ಟು 5

**

Comments