ಕಾಯೋ ಕಾಯೋ ಕಾಯೋ ವರವೀಯೋ venugopala dasaru kayo kayo kayo varaveeyo
Restart mobile & try if the above audio is not playing
ಶ್ರೀ ಶ್ರೀವೇಣುಗೋಪಾಲದಾಸರ ಕೃತಿ
ಶ್ರೀ ವಿಜಯದಾಸರ ಸ್ತೋತ್ರ ಪದ
ರಾಗ : ತೋಡಿ ತಾಳ : ಆದಿ
ಕಾಯೋ ಕಾಯೋ ಕಾಯೋ - ವರವೀಯೋ ॥ಪ॥
ಕಾಯೋ ಕಾಯೋ ವರವೀಯೋ ವಿಜಯ
ಗುರುರಾಯ ನೀನಲ್ಲದೆ ಉಪಾಯ ಮತ್ತಿಲ್ಲ ॥ಅ.ಪ॥
ತಾಪತ್ರಯ ಬಲುದ್ದೀಪನವಾಗಿದೆ
ನೀ ಪರಿಪಾಲಿಸದೀಪರಿ ಥರವೇ
ಪಾಪಗಳೆಣಿಸದೆ ಪಾವನ ಮಾಳ್ಪದು
ಶ್ರೀಪತಿ ಪಡೆದ ಸುರಾಪಗದಂತೆ ॥೧॥
ಸ್ವೀಕರಿಸೆನ್ನ ನಿರಾಕರಿಸದೆ ಬಲು
ವ್ಯಾಕುಲನಾಗಿಹೆ ನೀ ಕರುಣದಲಿ
ದೂರ ನೀ ನೋಡಲು ಆರು ಇಲ್ಲವೊ ಗತಿ
ಕಾರುಣ್ಯದಿಂದ ನಿವಾರಿಸೊ ದುರಿತ ॥೨॥
ಮಾನವರೊಳಗೆಲ್ಲ ಈ ನರಮೂರ್ಖನು
ಏನು ಅರಿಯ ಬಲು ದೀನನಾಗಿಹನು
ಆಲಸ್ಯ ತಾಳದು ಪಾಲಿಸು
ವೇಣು ಗೋ-ಪಾಲ ವಿಠಲನಾಳು ಕೃಪಾಳು॥೩॥
**
Comments
Post a Comment