ಎಣಿಸಲೆನ್ನಳವೆ ನಿನ್ನ ಮಹಿಮೆಗಳ vadirajaru enisalennalave ninna mahimegala


Restart mobile & try if the above audio is not playing


ಶ್ರೀ ಶ್ರೀವಾದಿರಾಜರ ಕೃತಿ

ರಾಗ : ವಸಂತ    ಆದಿತಾಳ


ಎಣಿಸಲೆನ್ನಳವೆ ನಿನ್ನ ಮಹಿಮೆಗಳ

ಗುಣಗಣನುತ ನಾಮ ಕೋದಂಡರಾಮ llಪll


ಜಲದಿ ಸಂಚರಿಸಿದೆ ಬಲುಗಿರಿಯ ಧರಿಸಿದೆ

ಲಲನೆ ಧರಿತ್ರಿಯ ಪೊರೆದೆ

ಛಲದಿ ಹಿರಣ್ಯಕಶಿಪುವ ಸಂಹರಿಸಿದೆ

ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ ll1ll


ದುರುಳ ರಾಯರ ತರಿದೆ

ಹರನ ಬಿಲ್ಲ ಮುರಿದೆ 

ನರಗೆ ಸಾರಥಿಯಾಗಿ ಮೆರೆದೆ

ತರುಣಿಯರ ವ್ರತ ಗೆಲಿದೆ

ತುರಗವನೇರಿ

ಶರಣಾಗತರನ್ನು ಪೊರೆವುದು ನಿನ್ನ ಬಿರುದೆ ll2ll


ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ

ಕರುಣಿಸು ಗುಣಸಂಪನ್ನ

ಸ್ಮರನಜನಕ ಚೆನ್ನ ಧರಣಿಜೆಯ ಮೋಹನ್ನ

ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ ll3ll

**

Comments