ಉಡುಪಿನ ಕೃಷ್ಣ ಸಕಲ ಜಗದೀಶ vadirajaru udupina krishna sakala jagadisha
Restart mobile & try if the above audio is not playing
ಶ್ರೀ ವಾದಿರಾಜರ ಕೃತಿ
ರಾಗ : ಕಲ್ಯಾಣಿ Thishranade
ಉಡುಪಿನ ಕೃಷ್ಣ ಸಕಲ ಜಗದೀಶ |
ಬಿಡದೆನ್ನ ಸಲಹೋ ಮಧ್ವಹೃದಯ ವಾಸ || ಪ ||
ವಿಕಸಿತ ನಯನ ಜಲಜಾಸನನ |
ಪ್ರಕಟಿತ ತಾತ ದಿತಿಕುಲ ದಮನ |
ತ್ರಿಕರಣ ಪರಿಯ ತ್ರಿವಿಧತಾಪ ಶಮನ |
ಸುಕುಮಾರರೂಪ ಮೋಹನ ರಮಾರಮಣ ||೧||
ಎಸೆವ ಕಿರುಡೊಳ್ಳಿನ ಶುಭಾಕಾರ ಗಂಡ |
ಪಸುಳೆಯ ಭಾವದಿ ಮೆರೆವ ಪ್ರಚಂಡ |
ಶಶಿಸಮವದನ ಕುಂಡಲಶೋಭಿಗಂಡ |
ಅಸುರ ಸಂಹಾರ ದೋರ್ಧೃತಪಾಶದಂಡ ||೨||
ಶ್ರುತಿಯರು ಸೇವೆಯರು ಬಿಡದೆ ಬಣ್ಣಿಸುವ |
ಪ್ರತಿಯಿಲ್ಲದದುಭುತ ಮಹಿಮನುದಾವ |
ಯತಿಕುಲ ಸೇವ್ಯ ಹಯವದನ ದೇವ |
ಪತಿಕರಿಸೊ ನಮ್ಮ ಭವವನದಾವ ||೩||
**

Comments
Post a Comment