ದಿನಗಳನು ಕಳೆವ ಜನರೇ ಸುಜನರು vadirajaru dinagalanu kaleva janare sujanaru
Restart mobile & try if the above audio is not playing
ಶ್ರೀ ಶ್ರೀಹರಿದಾಸರ ಹೃದಯ ಎಂಬ ಗ್ರಂಥದಿಂದ ಆಯ್ದ ಶ್ರೀವಾದಿರಾಜಯತಿ ವಿರಚಿತ
"ಸುಜನರ ದಿನಚರಿ"
ರಾಗ : ಕೇದಾರಗೌಳ ತಾಳ : ಆದಿ
ದಿನಗಳನು ಕಳೆವ ಜನರೇ ಸುಜನರು ll ಪ ll
ವನಜನಾಭನ ದಾಸಜನಸಮಾಗಮದಿಂದ ll ಅ ಪ ll
ಅರುಣೋದಯದಲೆದ್ದು ಆಚಮನಕೃತ್ಯದಲಿ
ಪರಿಶುದ್ಧನಾಗಿ ಇಹಪರಗಳಿಂದ l
ಎರಡು ವಿಧ ಸುಖವೀವ ಗುರುಮಧ್ವಮುನಿವರರ
ಪರಮಮತಪಿಡಿದು ಹರಿಚರಿತಾಮೃತವ ಸವಿದು ll 1 ll
ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ-
ಧ್ಯಾನಗಾಯತ್ರಿ ಗುರುಮಂತ್ರ ಜಪಿಸಿ
ಭಾನುಗರ್ಘ್ಯವನಿತ್ತು ಪರಮಾತ್ಮನಂಘ್ರಿಗಳ
ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ ll 2 ll
ಶ್ರೀವಾಸುದೇವನ ಅಡಿಗಡಿಗೆ ನೆನೆನೆನೆದು
ಪಾವಕಗೆ ಪ್ರಾತರಾಹುತಿಯನಿತ್ತು l
ಭಾವಜ್ಞರಲಿ ಸಕಲ ಪುರಾಣಗಳ ಕೇಳಿ
ಹೂವು ಶ್ರೀತುಳಸಿ ವನಗಳನು ಸೇವಿಸುತ ll 3 ll
ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ
ದೇವಪೂಜೆಯ ಮಾಡಿ ದೇವೇಶಗೆ l
ನೈವೇದ್ಯಗಳನಿತ್ತು ನಿತ್ಯತೃಪ್ತಗೆ ವೈಶ್ವ-
ದೇವ ಬಲಿಹರಣ ಅತಿಥಿಯ ಪೂಜೆಮಾಡುತ್ತ ll 4 ll
ಪರಮ ಹರುಷದಿಂದ ದೇವಪ್ರಸಾದವನು
ವರಮಾತೃಪಿತಸೋದರ ಸಹಿತ l
ಪರಮ ಸೌಖ್ಯದಿ ಪಂಕ್ತಿ ಪಾವನರ ಒಡಗೂಡಿ
ನರಹರೇ ಎನುತ ಭೋಜನಮಾಡಿ ಮುದದಿಂದ ll 5 ll
ಸಾಯಾಹ್ನ ಸಮಯ ಸಂಧ್ಯಾನ ಗಾಯತ್ರಿಜಪ
ಶ್ರೀಯರಸನಂಘ್ರಿಗಳ ಪೂಜೆಯನು ಮಾಡಿ l
ವಾಯು ಸಖಮುಖದ ಲಾಹುತಿಯನಿತ್ತು ಲಕ್ಷ್ಮೀನಾ-
ರಾಯಣನ ಗಾಯನದಿ ಕೊಂಡಾಡಿ ಪೊಗುಳುತ್ತ ll 6 ll
ಈ ವಿಧದಿ ದಿನಗಳನು ಕಳೆದು ರಾತ್ರಿಯಲೊಂದು -
ಜಾವದನಂತರ ಸುಖದಿ ಮಲಗಿ l
ಜಾವಜಾವದೊಳೆದ್ದು ನೆರೆಹೊರೆಯು ಕೇಳ್ವಂತೆ
ಪಾವನ್ನಚರಿತ ಹಯವದನನ್ನ ಸ್ಮರಿಸುತ್ತ ll7ll
**
-imageonline.co-merged.jpeg)
Comments
Post a Comment